ಗಾಜಿಯಾಬಾದ್, ಫೆ.14 (DaijiworldNews/PY): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಮಹಾತ್ಮ ಗಾಂಧಿ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಯ ಅವರು ಬೆಂಬಲ ಸೂಚಿಸಿದ್ದಾರೆ.
ಶನಿವಾರ ದೆಹಲಿ-ಉತ್ತರಪ್ರದೇಶ ಘಡಿಭಾಗದ ಗಾಜಿಪುರಕ್ಕೆ ಭೇಟಿ ನೀಡಿದ ಅವರು, "ಶಾಂತಿಯುತವಾಗಿ ಹೋರಾಟ ನಡೆಸಿ" ಎಂದು ಕರೆ ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, "ನಾನು ಇಲ್ಲಿಗೆ ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿಲ್ಲ. ರೈತರ ಪ್ರತಿಭಟನೆಗೆ ಬೆಂಬಲ ನೀಡಲು ಇಲ್ಲೆಗೆ ಬಂದಿದ್ದೇನೆ. ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಸಕರಾತ್ಮಕವಾಗಿ ಸ್ಪಂದಿಸಬೇಕು" ಎಂದಿದ್ದಾರೆ.
ಈ ವೇಳೆ ತಾರಾ ಗಾಂಧಿ ಅವರೊಂದಿಗೆ ರೈತ ಮುಖಂಡರು ಚರ್ಚಿಸಿದರು. "ತಾರಾ ಗಾಂಧಿ ಅವರು ಪ್ರತಿಭಟನಾನಿರತ ರೈತರಿಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ" ಎಂದು ರೈತ ಮುಖಂಡರು ತಿಳಿಸಿದ್ದಾರೆ.