ಸೂರತ್, ಫೆ.13 (DaijiworldNews/MB) : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗುತ್ತಿದ್ದು ಈವರೆಗೂ 1,511 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಅವರು, ''ಜನವರಿ 15ರಂದು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕಾರ್ಯ ಆರಂಭ ಮಾಡಿದ್ದು, ಫೆಬ್ರವರಿ 27ರವರೆಗೂ ಈ ಕಾರ್ಯ ಮುಂದುವರೆಯಲಿದೆ. ಫೆ.11ರ ಗುರುವಾರ ಸಂಜೆಯವರೆಗೂ 1,511ಕೋಟಿ ರೂಪಾಯಿ ಸಂಗ್ರಹವಾಗಿದೆ'' ಎಂದು ತಿಳಿಸಿದ್ದಾರೆ.
''ಇಡೀ ದೇಶವೇ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುತ್ತಿದೆ. ನಾವು ದೇಶದಾದ್ಯಂತ ನಾಲ್ಕು ಲಕ್ಷ ಗ್ರಾಮಗಳಿಂದ ಹಾಗೂ ಹನ್ನೊಂದು ಕೋಟಿ ಕುಟುಂಬಗಳಿಂದ ದೇಣಿಗೆ ಸಂಗ್ರಹ ಮಾಡಬೇಕು ಎಂಬ ಗುರಿ ಹೊಂದಿದ್ದೇವೆ. ಸುಮಾರು 492 ವರ್ಷಗಳ ಬಳಿಕ ಧರ್ಮದ ಇಂತಹ ವಿಚಾರಕ್ಕಾಗಿ ದೇಶದ ಜನರಿಗೆ ದೇಣಿಗೆ ನೀಡುವ ಅವಕಾಶ ಲಭಿಸಿದೆ'' ಎಂದು ಹೇಳಿದ್ದಾರೆ.