ಆಂದ್ರಪ್ರದೇಶ, ಫೆ.13 (DaijiworldNews/MB) : ಈ ಹಿಂದೆ ಹಲವು ಬಾರಿ ವಿವಾದಕ್ಕೆ ಕಾರಣವಾಗಿದ್ದ ತಮಿಳು ನಟಿ ಮೀರಾ ಮಿಥುನ್, ''ತನಗೆ ಕಿರುಕುಳ ಅನುಭವಿಸಿ ಸಾಕಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನಟಿ, ''ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಖಿನ್ನತೆಯಲ್ಲಿದ್ದೇನೆ, ನನ್ನ ಖಿನ್ನತೆಯನ್ನು ನಾನು ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದೇನೆ. ಆದರೆ ಕಿರುಕುಳ ನಿಂತಿಲ್ಲ. ನನ್ನ ಮಾನಸಿಕ ಆರೋಗ್ಯ ಹದಗೆಡುತ್ತಿದೆ'' ಎಂದು ಹೇಳಿದ್ದು ಮಾತ್ರವಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿದ್ದಾರೆ.
''3 ವರ್ಷಕ್ಕಿಂತ ಹೆಚ್ಚು ಕಾಲ ಕಿರುಕುಳಕ್ಕೊಳಗಾಗಿದ್ದೇನೆ, ಹಾಗಾಗಿ ನಾನು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ನಾನು ಈಗ ಇಲ್ಲಿ ಸಕ್ರಿಯಳಾಗಿದ್ದೇನೆ, ಏಕೆಂದರೆ, ನನ್ನ ಅಭಿಮಾನಿಗಳು, ನನ್ನ ಜನರ ಜೊತೆ ಮಾತುಕತೆ ನಡೆಸಲು ಇದು ನನ್ನ ಮಾಧ್ಯಮವಾಗಿದೆ, ಆದರೆ ನಾನು ಈಗ ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗಿದ್ದೇನೆ, ನಾನು ನೋವನ್ನು ಕೊನೆಗಾಣಿಸಲು ಬಯಸುತ್ತೇನೆ, ನಾನು ಸಾಯಲು ಬಯಸುತ್ತೇನೆ'' ಎಂದು ಕೂಡಾ ಹೇಳಿದ್ದಾರೆ.
ಹಾಗೆಯೇ ವಿಡಿಯೋವೊಂದನ್ನು ಕೂಡಾ ಹಾಕಿದ್ದಾರೆ.