ಮಂಡ್ಯ, ಫೆ.13 (DaijiworldNews/PY): "ದೇಶದಲ್ಲಿ ಕನ್ನಡ ಭಾಷೆಯನ್ನು ಪಕ್ಕಕ್ಕೆ ತಳ್ಳಿ ಬಲವಂತದಿಂದ ಹಿಂದಿ ಹೇರಿಕೆ ಮಾಡಿದಲ್ಲಿ ರಕ್ತಪಾತವಾಗುತ್ತದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಡ್ಯದ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ಹಾಮಾನಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಾರತ ದೇಶದಲ್ಲಿ ಕನ್ನಡ ಭಾಷೆಯನ್ನು ಪಕ್ಕಕ್ಕೆ ಸರಿಸಿ ಬಲವಂತದಿಂದ ಹಿಂದಿ ಹೇರಿಕೆ ಮಾಡಿದಲ್ಲಿ ರಕ್ತಪಾತವಾಗುತ್ತದೆ. ಕನ್ನಡ ಭಾಷೆಗೆ ಮೊದಲ ಸ್ಥಾನ ನೀಡಬೇಕು" ಎಂದರು.
"ಎಂದಿಗೂ ಕೂಡಾ ಹಿಂದಿ ಭಾಷೆ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ. ಉತ್ತರ ಭಾರತದ ಐದು ರಾಜ್ಯಗಳಲ್ಲಿ ಮಾತ್ರವೇ ಹಿಂದಿ ಭಾಷೆ ಇದೆ. ಉಳಿದಂತೆ ಬೇರೆ ಯಾವ ರಾಜ್ಯದಲ್ಲಿ ಹಿಂದಿ ಭಾಷೆ ಇಲ್ಲ. ಹಾಗಾಗಿ, ಹಿಂದಿ ರಾಷ್ಟ್ರ ಭಾಷೆಯಾಗಲು ಹೇಗೆ ಸಾಧ್ಯ?" ಎಂದು ಕೇಳಿದರು.
ದೇಶದಲ್ಲಿ ಒಂದು ವೇಳೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡಿದ್ದಲ್ಲಿ ರಕ್ತವಾಗುತ್ತದೆ. ಕೇಂದ್ರ ಸರ್ಕಾರ ಹಿಂದಿ ಹೇರಿಕೆಯ ಕನಸನ್ನು ಬಿಡಬೇಕು. ಭಾಷೆಯನ್ನು ಕಲಿಯಿರಿ ಬೇಡ ಎನ್ನುತ್ತಿಲ್ಲ. ಆದರೆ, ಕರ್ನಾಟಕದಲ್ಲಿ ಕನ್ನಡ ಮಾತ್ರವೇ ಸಾರ್ವಭೌಮ ಭಾಷೆಯಾಗಿರಬೇಕು" ಎಂದರು.