ನವದೆಹಲಿ, ಫೆ.13 (DaijiworldNews/MB) : ಲೋಕಸಭೆಯ ಶನಿವಾರ ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ( ತಿದ್ದುಪಡಿ) ಮಸೂದೆಯು ಧ್ವನಿಮತದಿಂದ ಅಂಗೀಕಾರಗೊಂಡಿದೆ.
ಈ ಮಸೂದೆಯು ಜಮ್ಮು ಮತ್ತು ಕಾಶ್ಮೀರ ಕೇಡರ್ನ ನಾಗರಿಕ ಸೇವಾ ಅಧಿಕಾರಿಗಳನ್ನು ಅರುಣಾಚಾಲ ಪ್ರದೇಶ, ಗೋವಾ, ಮೀಜೋರಾಂ ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್ನೊಂದಿಗೆ ವಿಲೀನಗೊಳಿಸಲು ಅವಕಾಶ ನೀಡುತ್ತದೆ.
ಇನ್ನು ಮಸೂದೆಯನ್ನು ಬದಲಿಸಿದ ಸುಗ್ರೀವಾಜ್ಞೆಯನ್ನು ವಿರೋಧಿಸುವ ಶಾಸನಬದ್ಧ ನಿರ್ಣಯವನ್ನು ಸದನವು ತಿರಸ್ಕರಿಸಿದ್ದು, ಈ ತಿದ್ದುಪಡಿಯನ್ನು ಕೂಡಾ ಧ್ವನಿ ಮತದಿಂದಲೇ ಸೋಲಿಸಲಾಗಿದೆ.
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ(ತಿದ್ದುಪಡಿ) ಮಸೂದೆಯನ್ನು ಬೆಂಬಲಿಸಿದ ಬಹುಜನ ಸಮಾಜ ಪಕ್ಷ(ಬಿಎಸ್ ಪಿ), ಸರ್ಕಾರದ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿತ್ತು.