ನವದೆಹಲಿ, ಫೆ.13 (DaijiworldNews/PY): ಪೆಟ್ರೋಲ್ ಹಾಗೂ ಡೀಸೆಲ್ ದರ ಸತತ ಐದನೇ ದಿನ ಕೂಡಾ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ಗೆ 95 ರೂ. ಸಮೀಕ್ಕೆ ತಲುಪಿದೆ.
ಸರ್ಕಾರ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳ ಅಧಿಸೂಚನೆಯ ಪ್ರಕಾರ, ಶನಿವಾರ ಪೆಟ್ರೋಲ್ ಲೀಟರ್ಗೆ 30 ಪೈಸೆ ಹಾಗೂ ಡೀಸೆಲ್ ಲೀಟರ್ಗೆ 36 ಪೈಸೆ ಅಧಿಕವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 88.41 ರೂ. ಗೆ ಇದ್ದರೆ, ಇನ್ನು ಡೀಸೆಲ್ ಬೆಲೆ 78.74 ರೂ.ಗೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ 94.93 ರೂ . ಇದ್ದರೆ, ಡೀಸೆಲ್ ಬೆಲೆ 85.70 ರೂ. ನಷ್ಟಿದೆ.
ಕಳೆದ ಒಂದು ವಾರದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 1.51 ಪೈಸೆಗೆ ಏರಿಕೆಯಾಗಿದ್ದರೆ, ಡೀಸೆಲ್ ಪ್ರತೀ ಲೀಟರ್ಗೆ 1.56 ಪೈಸೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.09 ರೂ. ಆಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 83.09 ರೂ. ಆಗಿದೆ.
ಇಂಧನ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ.