ನವದೆಹಲಿ, ಫೆ.13 (DaijiworldNews/PY): ಇಂದು ವಿಶ್ವ ರೇಡಿಯೋ ದಿನ. ಫೆ.13 ಅನ್ನು ವಿಶ್ವಸಂಸ್ಥೆ ವಿಶ್ವ ರೇಡಿಯೋ ದಿನ ಎಂದು ಘೋಷಣೆ ಮಾಡಿತ್ತು. ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋ ದಿನದ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನವೀನ ವಿಷಯ ಹಾಗೂ ಸಂಗೀತದೊಂದಿಗೆ ಆನಂದಿಸುವ ಎಲ್ಲಾ ರೇಡಿಯೋ ಕೇಳುಗರಿಗೆ ವಿಶ್ವ ರೇಡಿಯೋ ದಿನದ ಶುಭಾಶಯಗಳು. ಸಮಾಜದ ಜೊತೆ ಸಂಪರ್ಕವನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯುವ ಅದ್ಭುತ ಮಾಧ್ಯಮ ರೇಡಿಯೋ ಆಗಿದೆ" ಎಂದು ತಿಳಿಸಿದ್ದಾರೆ.
"ನಾನು ರೇಡಿಯೋದ ಸಕಾರಾತ್ಮಕ ಪರಿಣಾಮವನ್ನುವೈಯುಕ್ತಿವಾಗಿ ಅನುಭವಿಸಿದ್ದೇನೆ. ಮನ್ ಕಿ ಬಾತ್ಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.