ಮುಂಬೈ, ಫೆ.13 (DaijiworldNews/MB) : ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಇನ್ಸ್ಟಾಗ್ರಾಮಲ್ಲಿ ವ್ಯಕ್ತಿಯೊಬ್ಬ ಮೆಸೇಜ್ ಮಾಡಿ ಅಸಭ್ಯ ಪದಗಳಲ್ಲಿ ನಿಂದಿಸಿದ್ದು, ಪದೇ ಪದೇ ಹೀಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಮೆಸೇಜ್ನ ಸ್ಕ್ರೀನ್ ಶಾಟ್ ಅನ್ನು ಟ್ರೋಲ್ ಮಾಡುವ ಮೂಲಕವೇ ತಿರುಗೇಟು ನೀಡಿದ್ದಾರೆ.
ಆ ಸ್ಕೀನ್ ಶಾಟ್ನ್ನು ನಟಿ ಟ್ರೋಲ್ ಮಾಡಿರುವ ನಟಿ ಬಳಿಕ ಡಿಲೀಟ್ ಮಾಡಿದ್ದಾರೆ. "ವಾಹ್! ನಿಮ್ಮ ಕುಟುಂಬ ಮತ್ತು ಸ್ನೇಹಿತರು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡಬೇಕು" ಎಂದು ಬರೆದುಕೊಂಡಿದ್ದಾರೆ.
ಇನ್ನು ನಟಿ ದೀಪಿಕಾ ಪಡುಕೋಣೆ ಈ ವರ್ಷ ಬಿಝಿಯಾಗಿದ್ದಾರೆ. ದೀಪಿಕಾ ಅಮಿತಾಬ್ ಬಚ್ಚನ್ ಮತ್ತು ಪ್ರಭಾಸ್ ಜೊತೆಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಪತಿ ರಣವೀರ್ ಸಿಂಗ್ ಜೊತೆಗೂ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ.