ಬೆಂಗಳೂರು, ಫೆ.13 (DaijiworldNews/MB) : ಕನ್ನಡ ನಟ ಮಯೂರ್ ಪಟೇಲ್ಗೆ ಸೈಟ್ ಖರೀದಿ ವಿವಾದದ ಸಂಬಂಧ ಜೀವಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ನಟ ಮಯೂರ್ ಎಂ.ಎಸ್ ಸುಬ್ರಹ್ಮಣ್ಯಂ ಎಂಬವರಿಂದ ಸೈಟ್ ಖರೀದಿಸಲು ನಿರ್ಧರಿಸಿದ್ದರು. ಹಾಗೆಯೇ ರಿಜಿಸ್ಟರ್ ಕೂಡಾ ಮಾಡಿಸಿಕೊಂಡಿದ್ದರು. ಆದರೆ ಈಗ ಈ ಸೈಟ್ಗೆ ಅಪರಿಚಿತ ವ್ಯಕ್ತಿಗಳು ಕಂಪೌಂಡ್ ಹಾಕಿದ್ದು ಮಾತ್ರವಲ್ಲದೇ "ನೀನೇನಾದ್ರೂ ಈ ಸೈಟ್ಗೆ ಬಂದ್ರೆ ನಾವ್ಯಾರೆಂದು ನಿನಗೆ ತೋರಿಸ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಮಯೂರ್ ಪಟೇಲ್ ಅವರು ಅನಂತರಾಮರೆಡ್ಡಿ, ಆತನ ಮಗ ಮಂಜುನಾಥ್ ರೆಡ್ಡಿ ಹಾಗೂ ಇನ್ನೂ ನಾಲ್ವರ ವಿರುದ್ಧ ಎಸ್ಆರ್ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ.