ನವದೆಹಲಿ, ಫೆ.13 (DaijiworldNews/PY): "ಕೊರೊನಾದಂತಹ ಸವಾಲುಗಳನ್ನು, ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಕಾರಣ ಸರ್ಕಾರವನ್ನು ಹಿಂದೆ ಸರಿಯುವಂತೆ ಮಾಡಿಲ್ಲ. ದೇಶ ಸುದೀರ್ಘಾವಧಿಯ ತನಕ ಉಳಿದು ಬೆಳೆಯಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಆ ರೀತಿಯಾದ ಕಾರ್ಯಗಳನ್ನು ಕೈಗೊಂಡಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೆಂದ್ರ ಬಜೆಟ್ನ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, "ಭಾರತೀಯ ವ್ಯಾಪಾರ ಕೌಶಲ್ಯಗಳು ಸೇರಿದಂತೆ ಉದ್ಯಮ ಕೌಶಲ್ಯಗಳು, ವ್ಯವಸ್ಥಾಪಕ ಕೌಶಲ್ಯಗಳನ್ನು ಬಿಜೆಪಿ ಗೌರವಿಸಿದ್ದು, ದೇಶದಲ್ಲಿ ನಂಬಿಕೆ ಇಟ್ಟಿದೆ. ನಾವು ಯಾವುದೋ ಕಡೆಯಿಂದ ಎರವಲು ಪಡೆದುಕೊಂಡು ದೇಶದ ಜನತೆಗೆ ಹೈಬ್ರಿಡ್ ಅನ್ನು ನೀಡಿಲ್ಲ" ಎಂದಿದ್ದಾರೆ.
"ನಾವಿಬ್ಬರು, ನಮಗಿಬ್ಬರು ಎನ್ನುವ ಘೋಷಣೆಯೊಂದಿತ್ತು. ಆದರೆ, ಕೊರೊನಾದಂತಹ ಸಾಂಕ್ರಾಮಿಕದ ಇನ್ನೊಂದು ರೀತಿಯಲ್ಲಿ ಬಂದಂತೆ ಈ ಘೋಷಣೆ ಕೂಡಾ ಬಂದಿದೆ" ಎಂದು ಹೇಳಿದ್ದಾರೆ.