ಲಕ್ನೊ, ಫೆ. 13 (DaijiworldNews/HR): ರಾಜ್ಯದ ಎಲ್ಲಾ ಪದವಿ, ಸ್ನಾತಕೋತ್ತರ ಕಾಲೇಜು, ಖಾಸಗಿ ವಿಶ್ವವಿದ್ಯಾಲಯಗಳನ್ನು ಫೆಬ್ರವರಿ 15 ರಿಂದ ಪುನರಾರಂಭಗೊಳಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.
ಕೇಂದ್ರ ಸರ್ಕಾರದ ಕೊರೊನಾ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಸರ್ಕಾರ ಆದೇಶ ನೀಡಿದ್ದು, ಉನ್ನತ ಶಿಕ್ಷಣ ಅಧಿಕಾರಿಗಳ ಸಂವಹನ ಪತ್ರದ ಪ್ರಕಾರ, "ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಉಪನ್ಯಾಸಕರು ಮಾಸ್ಕ್ ನ್ನು ಧರಿಸಬೇಕು ಎಂದು ಹೇಳಿದ್ದು, ಜೊತೆಗೆ ತರಗತಿ ಕೋಣೆಯಲ್ಲಿ ಆರು ಅಡಿಗಳ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳನ್ನು ಕೂರಿಸಬೇಕು ಮತ್ತು ಎಲ್ಲಾ ಕಾಲೇಜು ಸಂಸ್ಥೆಗಳು ಸ್ಯಾನಿಟೈಸೇಶನ್ ಹಾಗೂ ಥರ್ಮಲ್ ಸ್ಕ್ಯಾನಿಂಗನ್ನು ಕಡ್ಡಾಯವಾಗಿ ಮಾಡಬೇಕು" ಎಂದು ಹೇಳಿದೆ.
ಇನ್ನು, ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಸಿಬ್ಬಂದಿಗಳು ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆಗೆ ಒಳಪಡಿಸವುದು ಕಡ್ಡಾಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.