ಬೆಂಗಳೂರು, ಫೆ. 12 (DaijiworldNews/SM): ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮೇ 24ರಿಂದ ಜೂ. 16ರವರೆಗೆ ಅಂತಿಮ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೋವಿಡ್ ಕಾರಣದಿಂದಾಗಿ ಎಲ್ಲಾ ಕಾರ್ಯಗಳು ತಡವಾಗಿವೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಇದೀಗ ಬಿಡುಗಡೆಗೊಳಿಸಲಾಗಿದೆ. ಅಧಿಕೃತ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಸಚಿವರು, ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಗಳಿಗೆ ಬಂದಿರುವ ಆಕ್ಷೇಪಣೆಗಳು, ನೀಟ್, ಜೆಇಇಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು.
ಇನ್ನು ಮುಂದಿನ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಕೂಡ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ
24-05-2021- ಇತಿಹಾಸ
25-05-2021-ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
26-05-2021 ಭೂಗೋಳ ಶಾಸ್ತ್ರ
27-05-2021 ಮನಃಶಾಸ್ತ್ರ/ ಮೂಲಗಣಿತ
28-05-2021 ತರ್ಕಶಾಸ್ತ್ರ
29-05-2021 ಹಿಂದಿ
31-05-2021 ಇಂಗ್ಲಿಷ್,
01-06-2021-ಮಾಹಿತಿ ತಂತ್ರಜ್ಞಾನ/ಹೆಲ್ತ್ಕೇರ್
02-06-2021 ರಾಜ್ಯಶಾಸ್ತ್ರ/ಗಣಕ ವಿಜ್ಞಾನ,
03-06-2021 ಜೀವವಿಜ್ಞಾನ/ಎಲೆಕ್ಟ್ರಾನಿಕ್ಸ್
04-06-2021 ಅರ್ಥಶಾಸ್ತ್ರ
05-06-2021 ಗೃಹ ವಿಜ್ಞಾನ
07-06-2021 ವ್ಯವಹಾರ ಅಧ್ಯಯನ/ ಭೌತವಿಜ್ಞಾನ
08-06-2021 ಐಚ್ಛಿಕ ಕನ್ನಡ
09-06-2021, ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್,
10-06-2021 ಸಮಾಜ ಶಾಸ್ತ್ರ/ ರಸಾಯನವಿಜ್ಞಾನ
11-06-2021 ಉರ್ದು/ ಸಂಸ್ಕೃತ
12-06-2021 ಸಂಖ್ಯಾಶಾಸ್ತ್ರ
14-06-2021 ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ
15-06-2021 ಭೂಗರ್ಭಶಾಸ್ತ್ರ
16-06-2021 ಕನ್ನಡ ಪರೀಕ್ಷೆ