ನವದೆಹಲಿ, ಫೆ.12 (DaijiworldNews/HR): "ಎಲ್ಲಾ ಪ್ಯಾಸೆಂಜರ್ ರೈಲುಗಳ ಸೇವೆಗಳನ್ನು ಅತಿ ಶೀಘ್ರದಲ್ಲಿ ಪುನರಾರಂಭಿಸಲಾಗುವುದು" ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
"ಕೊರೊನಾ ಲಾಕ್ಡೌನ್ ಬಳಿಕ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಮತ್ತೆ ಹಂತ ಹಂತವಾಗಿ ಪುನರಾರಂಭಿಸುತ್ತಿದ್ದು, ಶೇ.65ರಷ್ಟು ರೈಲುಗಳು ಸದ್ಯಕ್ಕೆ ದೇಶದಾದ್ಯಂತ ಸಂಚರಿಸುತ್ತಿವೆ. ಇನ್ನೂ ಹೆಚ್ಚಿನ ರೈಲುಗಳು ಅತಿ ಶೀಘ್ರದಲ್ಲಿ ಸಂಚರಿಸಲಿವೆ. ಈ ಮುನ್ನಾ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ" ಎಂದು ಸಚಿವಾಲಯ ಹೇಳಿದೆ.
"ಇನ್ನು ಹೋಳಿ ಹಬ್ಬದ ಸಂದರ್ಭದಲ್ಲಿ ಪ್ಯಾಸೆಂಜರ್ ಟ್ರೈನ್ ಸೇವೆಯನ್ನು ಹೆಚ್ಚಿಸಬೇಕು ಎಂಬ ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಚಿವಾಲಯು ಹೆಚ್ಚಿನ ಸಂಖ್ಯೆಯ ರೈಲುಗಳ ಸೇವೆಯನ್ನು ಪುನರಾರಂಭಿಸಬಹುದು" ಎಂದು ಹೇಳಲಾಗುತ್ತಿದೆ.