ಬೆಳಗಾವಿ, ಫೆ.12 (DaijiworldNews/HR): "ಸಚಿವ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಕ್ಷೇತ್ರ ನನ್ನ ಮುಂದಿನ ಟಾರ್ಗೆಟ್ ಆಗಿದ್ದು, ಪಕ್ಷ ಬಯಸಿದರೆ ಗೋಕಾಕದಿಂದ ಸ್ಪರ್ಧಿಸುತ್ತೇನೆ" ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ರಮೇಶ ಜಾರಕಿಹೊಳಿ ಅವರು ಗ್ರಾಮೀಣ ಕ್ಷೇತ್ರದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ, ಮಾಡಲಿ. ನಾನೂ ಇನ್ನು ಮುಂದೆ ರಮೇಶ ಪ್ರತಿನಿಧಿಸುವ ಗೋಕಾಕ್ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದರೆ ಗೋಕಾಕದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತೇನೆ" ಎಂದರು.
ಇನ್ನು "ಸಚಿವ ರಮೇಶ ಜಾರಕಿಹೊಳಿ ನೀಡುತ್ತಿರುವ ಹೇಳಿಕೆಗಳಿಗೆ ಮತ್ತು ಆರೋಪಕ್ಕೆ ನಾನೇನೂ ಮೌನವಾಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನ ಗ್ರಾಮೀಣ ಕ್ಷೇತ್ರದ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಜನರ ಸೇವೆ ಮಾಡುತ್ತ ನಾನು ಮುಂದುವರಿಯುತ್ತೇನೆ. ಕ್ಷೇತ್ರದ ಜನರಿಂದಲೇ ಜಾರಕಿಹೊಳಿ ಅವರಿಗೆ ತಕ್ಕ ಉತ್ತರ ಕೊಡಬೇಕು ಅಂದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.