ನವದೆಹಲಿ, ಫೆ.12 (DaijiworldNews/PY): "ಚೀನಾಕ್ಕೆ ಸುಮಾರು 38,000 ಚದರ ಕಿಲೋ ಮೀಟರ್ ಭಾರತದ ಪ್ರದೇಶವನ್ನು ಉಡುಗೊರೆಯಾಗಿ ನೀಡಿವ ಮೂಲಕ ಜವಾಹರ್ಲಾಲ್ ನೆಹರೂ ಅವರು ಹಿಮಾಲಯನ್ ಬ್ಲೆಂಡರ್ ಸೃಷ್ಟಿಸಿದ್ದರು. ಈಗ ಕಾಂಗ್ರೆಸ್ಗೆ ವಾಸ್ತವದ ಸ್ಥಿತಿಗೆ ಅರಿವಿಗೆ ಬಂದಿದೆ" ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, "ಕೊನೆಗೂ ಕಾಂಗ್ರೆಸ್ಗೆ ವಾಸ್ತವ ಸ್ಥಿತಿಯ ಅರಿವಾಗಿರುವುದು ಸಂತೋಷವಾಗಿದೆ. ಚೀನಾಕ್ಕೆ 38,000 ಚದರ ಕಿಲೋ ಮೀಟರ್ ಭಾರತದ ಪ್ರದೇಶವನ್ನು ನೀಡಿದ್ದು ಜವಾಹರ್ಲಾಲ್ ನೆಹರೂ ಅವರು. ಈಗ ಕಾಂಗ್ರೆಸ್ಗೆ ವಾಸ್ತವ ಸ್ಥಿತಿಯ ಅರಿವಾಗಿದೆ. ಹೇಡಿ ರಾಹುಲ್ ಗಾಂಧಿ ಅವರನ್ನು ಈ ರೀತಿಯಾದ ಪ್ರಮಾದಕ್ಕೆ ಕಾಂಗ್ರೆಸ್ ಪ್ರಶ್ನಿಸುತ್ತದೆಯೇ?. ಪ್ರಧಾನಿ ಮೋದಿ ಅವರ ವಿರುದ್ದ ರಾಹುಲ್ ಗಾಂಧಿ ಅವರು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭಾರತದ ಪ್ರದೇಶವನ್ನು ಬಿಟ್ಟುಕೊಟ್ಟಿದ್ದಾರೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.