ನವದೆಹಲಿ, ಫೆ.12 (DaijiworldNews/HR): ತೈಲ ಮಾರುಕಟ್ಟೆ ಕಂಪೆನಿಗಳು ಮತ್ತೆ ತೈಲ ಬೆಲೆಗಳನ್ನು ಶುಕ್ರವಾರ ಏರಿಸಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 88ಕ್ಕೆ ಏರಿಕೆಯಾಗಿದೆ.
ಸಾಂಧರ್ಭಿಕ ಚಿತ್ರ
ದೆಹಲಿಯಲ್ಲಿ 87ರೂ. 85 ಪೈಸೆ ಇದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 88ರೂ 14 ಪೈಸೆಗೆ ಬಂದು ತಲುಪುವುದರ ಮೂಲಕ 29 ಪೈಸೆ ಹೆಚ್ಚಳವಾಗಿದೆ. ಡಿಸೇಲ್ ಪ್ರತಿ ಲೀಟರ್ ಗೆ 25 ಪೈಸೆ ಹೆಚ್ಚಳವಾಗುವುದರ ಮೂಲಕ 78ರೂ 03 ಪೈಸೆ ಇದ್ದ ಬೆಲೆ 78ರೂ 38 ಪೈಸೆ ಆಗಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.64 ರೂ ಆದರೇ, ಡೀಸೆಲ್ ಪ್ರತಿ ಲೀಟರ್ ಗೆ 85.32 ರೂ.ಗೆ ಏರಿದೆ.
ಇನ್ನು ಚೆನೈನಲ್ಲಿ ಪೆಟ್ರೋಲ್ ನ ಪ್ರತಿ ಲೀಟರ್ಗೆ 90.44 ರೂ. ಆಗಿದ್ದು, 83.52 ರೂ ಪ್ರತಿ ಲೀಟರ್ ಡಿಸೇಲ್ ಬೆಲೆಯಾಗಿದೆ.
ಕೊಲ್ಕತ್ತಾದಲ್ಲಿ 89.44 ರೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಾಗಿದ್ದು, 81.96 ರೂ ಡಿಸೇಲ್ ಬೆಲೆಗೆ ಏರಿಕೆಯಾಗಿದೆ ಎನ್ನಲಾಗಿದೆ.