ಕೋಲ್ಕತ್ತಾ, ಫೆ.12 (DaijiworldNews/HR): "ಬಿಜೆಪಿ ಸರ್ಕಾರವನ್ನು ಪಶ್ಚಿಮ ಬಂಗಾಳದಲ್ಲಿ ರಚಿಸುವವರೆಗೂ ನಮಗೆ ವಿಶ್ರಾಂತಿ ಇಲ್ಲ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ನಮಗಿದೆ. ಮಮತಾ ಬ್ಯಾನರ್ಜಿ ಸರ್ಕಾರವನ್ನು ಅಧಿಕಾರ ತೊರೆಯುವಂತೆ ಮಾಡುವುದು ಹಾಗೂ ಬಿಜೆಪಿಯನ್ನು ಗಟ್ಟಿಗೊಳಿಸುವುದಷ್ಟೇ ನಮ್ಮ ಹೋರಾಟವಲ್ಲ, ಪಶ್ಚಿಮ ಬಂಗಾಳವನ್ನು ಬಂಗಾರದ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ" ಎಂದರು.
"ಪೂರ್ವ ಭಾರತದ ವೈಭವವನ್ನು ಮರಳಿ ತರುವುದು ಹಾಗೂ ಅಕ್ರಮ ವಲಸೆ ಸಮಸ್ಯೆ ನಿರ್ಮೂಲನೆ ಮಾಡುವ ಮೂಲಕ ದೇಶದ ಗಡಿಗಳನ್ನು ಭದ್ರಪಡಿಸುವುದು, ಪೌರತ್ವ ತಿದ್ದುಪಡಿ ಮೂಲಕ ನಿರಾಶ್ರಿತರಿಗೆ ಪೌರತ್ವ ನೀಡುವುದೂ ಬಿಜೆಪಿಯ ಮುಖ್ಯ ಹೋರಾಟವಾಗಿದೆ" ಎಂದು ಹೇಳಿದ್ದಾರೆ.
ಇನ್ನು "ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 200ಕ್ಕೂ ಅಧಿಕ ಸ್ಥಾನಗಳನ್ನು ಮೂಲಕ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವಿದೆ. ಏಪ್ರಿಲ್-ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನೂ ಮುಕ್ತವಾಗಿ ಮತ ಚಲಾಯಿಸಬಹುದು" ಎಂದಿದ್ದಾರೆ.