ನವದೆಹಲಿ, ಫೆ.11 (DaijiworldNews/PY): "ಬಿಜೆಪಿ ಸರ್ಕಾರಕ್ಕೆ ಅಲ್ಪಸಂಖ್ಯಾತರು ಹೆದರುವಂತಾಗಿದ್ದು, ಅವರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ" ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.
ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಗ್ನಿಮಿತ್ರಾ ಪೌಲ್ ಹಾಗೂ ಹಲವು ಮಂದಿ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು. ಈ ಸಂದರ್ಭ ಅಗ್ನಿಮಿತ್ರಾ ಹಾಗೂ ನುಸ್ರತ್ ನಡುವೆ ವಾಕ್ಸಮರ ನಡೆದಿದೆ.
"ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹಾಯ ಮಾಡಿಲ್ಲ" ಎಂದು ಅಗ್ನಿಮಿತ್ರಾ ಅವರು ಆರೋಪಿಸಿದ್ದರು.
ಅಗ್ನಿಮಿತ್ರಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ನುಸ್ರತ್ ಜಹಾನ್, "ಅಗ್ನಿಮಿತ್ರಾ ಅವ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧವಿದೆ. ಬಿಜೆಪಿ ಸರ್ಕಾರ ಬಂದರೆ ತಮ್ಮ ಅವನತಿ ಎನ್ನುವ ಭಯ ಅಲ್ಪಸಂಖ್ಯಾತರಲ್ಲಿದೆ" ಎಂದು ತಿರುಗೇಟು ನೀಡಿದ್ದಾರೆ.
ಈ ಸಂದರ್ಭ ಜೈ ಶ್ರೀರಾಮ ಘೋಷಣೆಯ ವಿಚಾರ ಮುನ್ನೆಲೆಗೆ ಬಂದಿದ್ದು, "ಜೈಶ್ರೀರಾಮ ಎನ್ನುವ ಘೋಷಣೆ ಸಮೃದ್ದಿಯ ಪ್ರತೀಕವಾಗಿದೆ. ಇದು ರಾಜಕೀಯ ಜಯಘೋಷವಲ್ಲ. ಜನರು ಜೈಶ್ರೀರಾಮ, ಸೀತಾರಾಮ ಹಾಗೂ ರಾಮ ರಾಮ ಎಂದು ಪಠಿಸುವುದು ಸಾಮಾನ್ಯವಾಗಿದೆ. ಮಮತಾ ಬ್ಯಾನರ್ಜಿ ಅವರು ಹಿಂದೂ ಆಗಿದ್ದರೆ ಅವರಿಗೆ ಜೈ ಶ್ರೀರಾಮ ಘೋಷಣೆಯಿಂದ ಮುಜುಗರವಾಗಬೇಕಿತ್ತು" ಎಂದು ಅಗ್ನಿಮಿತ್ರಾ ಪೌಲ್ ಕೇಳಿದ್ದರು.
ಹೀಗೆ ರಾಜಕೀಯ ವಿಚಾರಗಳ ಬಗ್ಗೆ ಇಬ್ಬರು ನಾಯಕಿಯರ ನಡುವೆ ಚರ್ಚೆ ನಡೆಯಿತು.