ವಿಜಯಪುರ, ಫೆ.11(DaijiworldNews/HR): "ಬೇರೆ ಬೇರೆ ಸಮುದಾಯಗಳು ಮೀಸಲು ಬೇಡಿಕೆ ಕುರಿತು ನಡೆಯುತ್ತಿರುವ ಹೋರಾಟಗಳ ಕುರಿತು ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ" ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಪ್ರತಿಯೊಬ್ಬರಿಗೂ ಅವರ ಭಾವನೆ ಹೇಳಿಕೊಳ್ಳುವ, ಬೇಡಿಕೆ ಮಂಡಿಸುವ ಅವಕಾಶವಿದೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಮಾತನಾಡುವುದು ಸಹಜ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅವರು ಮಾಡುತ್ತಿರುವ ಯಾವ ಪ್ರಯತ್ನವೂ ಫಲ ನೀಡುವುದಿಲ್ಲ" ಎಂದರು.
ಇನ್ನು "ಸಿದ್ಧರಾಮಯ್ಯ ಅವರ ಹೇಳಿಕೆ ಫಲ ನೀಡುತ್ತದೆ ಎಂದಾದರೆ ಅದು ಕನಕಪುರ ಬಂಡೆ ವಿಷಯದಲ್ಲಿ ಮಾತ್ರ" ಎಂದು ತಿರುಗೇಟು ನೀಡಿದ್ದಾರೆ.