ಶ್ರೀನಗರ, ಫೆ.11 (DaijiworldNews/PY): "ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ ಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್ ನೇಣಿಗೇರಿದ 37ನೇ ವರ್ಷದ ಸ್ಮರಣೋತ್ಸವದ ಹಿನ್ನೆಲೆ ಕಾಶ್ಮೀರದಲ್ಲಿ ಜೆಕೆಎಲ್ಎಫ್ ಸಂಘಟನೆಯು ಗುರುವಾರ ಬಂದ್ಗೆ ಕರೆ ನೀಡಿದೆ. ಈ ಕಾರಣದಿಂದ ಜನಜೀವನ ಸಂಪೂರ್ಣ ಅಸ್ಯವ್ಯಸ್ತವಾಗಿದೆ" ಎಂದು ಅಧಿಕಾರಿಗಳು ಹೇಳಿದರು.
ಸಾಂದರ್ಭಿಕ ಚಿತ್ರ
"ಶ್ರೀನಗರದಲ್ಲಿ ವಾಣಿಜ್ಯ ಮಳಿಗೆಗಳು ಸೇರಿದಂತೆ ಹೆಚ್ಚಿನ ಅಂಗಡಿಗಳು, ಪೆಟ್ರೋಲ್ ಬಂಕ್ಗಳು ಮುಚ್ಚಿವೆ. ಅಲ್ಲದೇ, ಸಾರ್ವಜನಿಕ ಸಾರಿಗೆಗಳು ಕೂಡಾ ಸಂಚರಿಸುತ್ತಿಲ್ಲ. ಆದರೆ, ನಗರದಲ್ಲಿ ಆಟೋ ರಿಕ್ಷಾ, ಖಾಸಗಿ ಕಾರುಗಳು ಹಾಗೂ ಕ್ಯಾಬ್ಗಳು ಸಂಚರಿಸುತ್ತಿವೆ" ಎಂದರು.
"ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ ಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್ ನೇಣಿಗೇರಿದ 37ನೇ ವರ್ಷದ ಸ್ಮರಣೋತ್ಸವದ ಹಿನ್ನೆಲೆ ಜಮ್ಮು-ಕಾಶ್ಮೀರದ ಇತರೆ ಜಿಲ್ಲೆಗಳಲ್ಲೂ ಕೂಡಾ ಬಂದ್ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ" ಎಂದು ಹೇಳಿದರು.
ಸಂಸತ್ ಭವನದ ಮೇಲಿನ ದಾಳಿಯ ರೂವಾರಿಯಾದ ಅಫ್ಜಲ್ ಗುರುವನ್ನು ಫೆ.23ರಂದು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಫೆ.11ರಂದು ಜೆಕೆಎಲ್ಎಫ್ ಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್ನನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಇವರಿಬ್ಬರ ಸ್ಮರಣಾರ್ಥ ಫೆ.9 ಹಾಗೂ ಫೆ.11ರಂದು ಜಮ್ಮು-ಕಾಶ್ಮೀರದಾದ್ಯಂತ ಜೆಕೆಎಲ್ಎಫ್ ಸಂಘಟನೆಯು ಬಂದ್ಗೆ ಕರೆ ನೀಡಿದೆ.