ನವದೆಹಲಿ,ಫೆ.11(DaijiworldNews/HR): ಸಿಬಿಐನಲ್ಲಿ ಒಟ್ಟು 588 ಪ್ರಕರಣಗಳು ವಿಚಾರಣೆಗಾಗಿ ಬಾಕಿ ಇವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಇಂದು ತಿಳಿಸಿದೆ.
"2019 ಡಿಸೆಂಬರ್ 31ರಲ್ಲಿ ವಿಚಾರಣೆಗಾಗಿ ಒಟ್ಟು 711 ಪ್ರಕರಣಗಳು ಬಾಕಿ ಇದ್ದು, 2020 ಡಿಸೆಂಬರ್ 31ರ ವೇಳೆಗೆ ಬಾಕಿ ಪ್ರಕರಣಗಳ ಸಂಖ್ಯೆ 588ಕ್ಕೆ ಇಳಿದಿವೆ" ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.
ಇನ್ನು "ಸಿಬಿಐಯು ಸಾರ್ವಜನಿಕ ಸೇವಕರು, ಬ್ಯಾಂಕ್, ದೊಡ್ಡ ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧದ ಸಂಕೀರ್ಣ ಮತ್ತು ದೊಡ್ಡ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿದ್ದು, ಕೆಲವೊಮ್ಮೆ ಬಾಕಿ ಉಳಿದಿರುವ ಹಳೆಯ ಪ್ರಕರಣಗಳನ್ನು ಕೂಡ ಸಿಬಿಐ ಕೈಗೆತ್ತಿಗೊಳ್ಳುತ್ತದೆ" ಎಂದು ಹೇಳಿದ್ದಾರೆ.