ನವದೆಹಲಿ, ಫೆ.11 (DaijiworldNews/PY): "ದೇಶದ ಸಾರ್ವಭೌಮತೆ ರಕ್ಷಣೆ ವಿಚಾರದ ಬಗ್ಗೆ ಯಾವುದೇ ರೀತಿಯಾದ ಸವಾಲನ್ನು ಎದುರಿಸಲು ತಯಾರು ಎನ್ನುವುದನ್ನು ನಮ್ಮ ಭದ್ರತಾ ಪಡೆಗಳಿ ಮತ್ತೆ ನಿರೂಪಿಸಿವೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಗಡಿನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, "ಪ್ಯಾಂಗಾಂಗ್ ಸರೋವರದ ತೀರದಲ್ಲಿ ಸೇನಾ ನಿಯೋಜನೆ ಮಾಡುವ ವಿಚಾರದ ಬಗ್ಗೆ ಚೀನಾದೊಂದಿಗೆ ಮಾತುಕತೆ ಮಾಡಲಾಗಿದೆ. ಯಾವುದೇ ಸೇನಾ ಚಟುವಟಿಕೆಗಳನ್ನು ಮಾಡದಂತೆ ಉಭಯ ರಾಷ್ಟ್ರಗಳ ನಡುವೆ ಒಪ್ಪಂದವಾಗಿದ್ದು, ಸೇನೆಯನ್ನು ಮುಂದಿನ ಹಂತದಲ್ಲಿ ಹಿಂತೆಗೆದುಕೊಳ್ಳಲಾಗುತ್ತದೆ" ಎಂದು ತಿಳಿಸಿದರು.
"ಗಡಿನಿಯಂತ್ರಣ ರೇಖೆಯ ಬಳಿ ನಿಯೋಜನೆ ಮಾಡಲಾಗಿರುವ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಈ ಬಗ್ಗೆ ಮಾತುಕತೆಯಾಗಿದೆ. ಭಾರತ, ಗಡಿಯಲ್ಲೊ ಶಾಂತಿಯುತ ಸ್ಥಿತಿ ಕಾಪಾಡಿಕೊಳ್ಳಲು ಹಾಗೂ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ನಡೆದುಕೊಳ್ಳಲು ಎಂದಿಗೂ ಬದ್ದ" ಎಂದರು.
"ಚೀನಾವು, ಗಡಿನಿಯಂತರಣ ರೇಖೆಯ ಬಳಿ ಅಧಿಕ ಪ್ರಮಾಣದ ಸೇನೆ ಹಾಗೂ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಹೆಚ್ಚಿನ ಸೇನಾಪಡೆ, ಶಸ್ತ್ರಾಸ್ತ್ರಗಳನ್ನು ನಿಯೋಜಿಸಿತ್ತು" ಎಂದು ಹೇಳಿದರು.