ನವದೆಹಲಿ,ಫೆ.11(DaijiworldNews/HR): ಲಡಾಖ್ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಸೃಷ್ಟಿಯಾದ ಬಳಿಕ ಸೇನೆ ನಿಯೋಜಿಸಲಾಗಿದ್ದು, ಗಡಿಯಲ್ಲಿ ಚೀನಾದ ಸೇನೆ ವಾಪಸ್ ಹೋಗದೆ, ಭಾರತ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಭಾರತ ಮತ್ತು ಚೀನಾದ ಸೈನ್ಯ ಪ್ಯಾಂಗಾಂಗ್ ತೀರದಲ್ಲಿ ಬೀಡುಬಿಟ್ಟಿದ್ದು, ಕಳೆದ 10 ತಿಂಗಳಿನಿಂದ ಇದೇ ಪರಿಸ್ಥಿತಿಯಿದೆ. ಮಾತುಕತೆಯ ಮೂಲಕ ಸೇನಾಪಡೆ ಹಂತಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ರಾಷ್ಟ್ರಗಳು ಮುಂದಾಗಿದ್ದರೂ, ಪೂರ್ತಿಯಾಗಿ ಸೇನೆ ಹಿಂದಿರಗಲಿಲ್ಲ. ಹೀಗಾಗಿ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ಬಳಿಕವಷ್ಟೇ ಭಾರತ ಕೂಡ ಸೇನಾಪಡೆಯನ್ನು ವಾಪಸ್ ಕಳುಹಿಸಲಿದೆ ಎಂದು ಹೇಳಿದೆ.
ಇನ್ನು ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು. ಹಾಗಾಗಿ ಅಷ್ಟರವರೆಗೆ ಗಡಿಯಲ್ಲಿ ಸೇನೆ ಸನ್ನದ್ಧ ಸ್ಥಿತಿಯಲ್ಲೇ ಇರಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.