ಮುಂಬಯಿ, ಫೆ.11(DaijiworldNews/HR): 5 ತಿಂಗಳ ಮಗುವೊಂದು ನರಕೋಶಗಳಿಗೆ ಸಂಬಂಧಿಸಿದ ಸ್ಪೈನಲ್ ಮಸ್ಕಾಲರ್ ಅಟ್ರೋಫಿ (ಎಸ್ಎಂಎ) ಕಾಯಿಲೆಯಿಂದ ಬಳಲುತ್ತಿದ್ದು, ಮಗುವಿನ ಹೆತ್ತವರ ಮನವಿಯಂತೆ ಎಸ್ಎಂಎ ಔಷಧದ ಮೇಲಿನ 6 ಕೋಟಿ ರೂ. ಆಮದು ಸುಂಕ ಮತ್ತು ಜಿಎಸ್ಟಿಯನ್ನು ಕೇಂದ್ರ ಸರಕಾರ ಮನ್ನಾ ಮಾಡಿದೆ ಎನ್ನಲಾಗಿದೆ.
5 ತಿಂಗಳ ಮಗು ಎಸ್ಎಂಎ ಕಾಯಿಲೆಯಿಂದ ಬಳಲುತ್ತಿದ್ದು, ಅಮೇರಿಕಾದಿಂದ ಆಮದು ಮಾಡಿಕೊಳ್ಳುವ 'ಝೋಲ್ಗೆನ ಸ್ಮಾ' ಔಷಧ ಬಹಳ ದುಬಾರಿಯಾಗಿದ್ದು, ಇದರ ವೆಚ್ಚ 16 ಕೋಟಿ ರೂ. ಆಗಿದ್ದು, ಆಮದು ಸುಂಕ, ಜಿಎಸ್ಟಿ ಕಾರಣದಿಂದ 6 ಕೋಟಿ ರೂ. ಇದರಲ್ಲಿ ಸೇರ್ಪಡೆಯಾಗಿದ್ದು, ಪೋಷಕರು ನೊಂದುಕೊಂಡು ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, "ನಮ್ಮ ಜೀವನಪರ್ಯಂತ ದುಡಿದರೂ ಈ ತೆರಿಗೆಯಷ್ಟು ಕಟ್ಟುವುದಕ್ಕೆ ಸಾಧ್ಯವಿಲ್ಲ" ಎಂದಿದ್ದರು.
ಈ ಪತ್ರಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಧ್ವನಿಗೂಡಿಸಿದ್ದು, ಇದೀಗ ಈ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿದೆ ಎನ್ನಲಾಗಿದೆ.