ನವದೆಹಲಿ, ಫೆ.10 (DaijiworldNews/PY): ಪತ್ರಕರ್ತೆ ಪ್ರಿಯಾ ರಮಣಿ ವಿರುದ್ದ ಮಾಜಿ ಕೇಂದ್ರ ಸಚಿವ, ಪರ್ತಕರ್ತ ಎಂ.ಜೆ ಅಕ್ಬರ್ ದಾಖಲಿಸಿದ್ದ ಮಾನನಷ್ಟ ಪ್ರಕರಣದ ತೀರ್ಪನ್ನು ಫೆ.17ಕ್ಕೆ ದೆಹಲಿ ಕೋರ್ಟ್ ಮುಂದೂಡಿದೆ.
2018ರಲ್ಲಿ ಪ್ರಿಯಾ ರಮಣಿ ಮಿ ಟೂ ಆಂದೋಲನದ ವೇದಿಕೆಯ ಮೂಲಕ ತಮ್ಮಗೆ ಹಿಂದೆ ಆಗಿದ್ದ ಲೈಗಿಂಕ ಕಿರುಕುಳದ ಘಟನೆಯನ್ನು ಬಹಿರಂಪಡಿಸಿ, ಎಂ.ಜೆ ಅಕ್ಬರ್ ಅವರ ವಿರುದ್ದ ಆರೋಪ ಹೊರಿಸಿದ್ದರು. ಈ ಆರೋಪದ ಪ್ರತಿಯಾಗಿ 2018ರ ಅ.15ರಂದು ಎಂ.ಜೆ ಅಕ್ಬರ್ ಅವರು ಪ್ರಿಯಾ ರಮಣಿ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.
ಇದಾದ ನಂತರ ಅ.17 ರಂದು ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ ಅಕ್ಬರ್ ಅವರು ರಾಜೀನಾಮೆ ನೀಡಿದ್ದು, ತಮ್ಮ ವಿರುದ್ದ ಕೇಳಿಬಂದ ಆರೋಪಗಳನ್ನು ತಳ್ಳಿಹಾಕಿದ್ದಾರೆ.