ಬೆಂಗಳೂರು, ಫೆ.10 (DaijiworldNews/MB) : ಫೆಬ್ರವರಿ 9 ರ ಮಂಗಳವಾರ ಹೊರಡಿಸಿದ ಸುತ್ತೋಲೆಯ ಮೂಲಕ, ಧಾರ್ಮಿಕ ದತ್ತಿ ಇಲಾಖೆಯು ಎಲ್ಲಾ ದೇವಾಲಯಗಳಿಗೆ ಧಾರ್ಮಿಕ ಆಚರಣೆಗಳು, ಉತ್ಸವಗಳು, ರಥೋತ್ಸವ ಪುನರಾರಂಭಿಸಲು ಅವಕಾಶ ನೀಡಿದೆ.
ಕೊರೊನಾ ವೈರಸ್ ಸೋಂಕಿನ ದೃಷ್ಟಿಯಿಂದ ದೇವಾಲಯಗಳಿಗೆ ಪೂಜೆಗಳು ಮತ್ತು ಸೇವೆಗಳನ್ನು ಮಾತ್ರ ಮಾಡಲು ಅವಕಾಶವಿತ್ತು. ಎಲ್ಲಾ ವಿಶೇಷ ಪೂಜೆ ಮತ್ತು ಆಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾಮಾನ್ಯವಾಗಿ, ಪ್ರಮುಖ ದೇವಾಲಯಗಳಲ್ಲಿ ವಾರ್ಷಿಕ ಉತ್ಸವಗಳು ಫೆಬ್ರವರಿಯಲ್ಲಿ ನಡೆಯುತ್ತವೆ. ಈ ಆಚರಣೆ ಮಾಡಲು ಅನುಮತಿ ನೀಡುವಂತೆ ಭಕ್ತರು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಇದೀಗ ಈ ಹಬ್ಬಗಳ ಆಚರಣೆಗೆ ದೇವಾಲಯಗಳಿಗೆ ಅವಕಾಶ ನೀಡಲಾಗಿದೆ.
ಸಿನೆಮಾ ಮಂದಿರಗಳಿಗೆ ತೆರೆಯಲು ಅವಕಾಶ ನೀಡಿ, ದೇವಾಲಯಗಳಲ್ಲಿ ನಿಷೇಧವನ್ನು ವಿಸ್ತರಿಸಿದ್ದರಿಂದ ಭಕ್ತರು ಅಸಮಾಧಾನಗೊಂಡಿದ್ದರು. ಈಗ ಭಕ್ತರ ಒತ್ತಡಕ್ಕೆ ಮಣಿದು, ಸರ್ಕಾರವು ನಿರ್ಬಂಧಗಳನ್ನು ಸಡಿಲಗೊಳಿಸಿದೆ.