ಕೊಚ್ಚಿ, ಫೆ.10 (DaijiworldNews/MB) : ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಸನ್ನಿ ಲಿಯೋನ್ರನ್ನು ಬಂಧಿಸದಂತೆ ಅಪರಾಧ ದಳಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ.
ಪೆರುಂಬವೂರಿನ ನಿವಾಸಿ ಆರ್ ಶಿಯಸ್ ಎಂಬವರು ಸನ್ನಿ ಲಿಯೋನ್ ವಿರುದ್ಧ ದೂರು ನೀಡಿದ್ದು ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಹೇಳಿ 29 ಲಕ್ಷ ರೂಪಾಯಿ ಪಡೆದು ಬಾರದೆ ವಂಚನೆ ಮಾಡಿದ್ದಾರೆ ಎಂದು ದೂರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಸನ್ನಿ ಲಿಯೋನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ್ ಮೆನನ್ ನೇತೃತ್ವದ ನ್ಯಾಯಪೀಠ 29 ಲಕ್ಷ ರೂಪಾಯಿಗಳ ಹಣಕಾಸು ವಂಚನೆ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಆದೇಶ ನೀಡಿದೆ.
ಸನ್ನಿ ಲಿಯೋನ್ಗೆ ನೊಟೀಸ್ ನೀಡಿ ವಿಚಾರಣೆ ನಡೆಸಲು ಮಾತ್ರ ಅಪರಾಧ ದಳಕ್ಕೆ ಕೋರ್ಟ್ ಆದೇಶ ನೀಡಿದೆ.