ನವದೆಹಲಿ, ಫೆ.10 (DaijiworldNews/PY): "ಕಾಂಗ್ರೆಸ್ ಪಕ್ಷವು, ನೂತನ ಕೃಷಿ ಕಾಯ್ದೆಗಳ ಬಗ್ಗೆ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ರೈತ ಸ್ನೇಹಿ ಕೇಂದ್ರ ಸರ್ಕಾರವು ಕೃಷು ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ, ತನ್ನ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ದೇಶದ ಜನರ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ" ಎಂದಿದ್ದಾರೆ.
"ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರು ಸಹ ಕೃಷಿ ಕಾಯ್ದೆಯ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಪುನಃ ಹಾದಿ ತಪ್ಪಿಸುವ ಪ್ರಯತ್ನ ಮಾಡಿದರು. ಆದರೆ, ಸಚಿವ ಅನುರಾಗ್ ಠಾಕೂರ್ ಅವರ ಸುಳ್ಳನ್ನು ಕೂಡಲೇ ಬಹಿರಂಗಪಡಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಹೊಸ ಕೃಷಿ ಕಾಯ್ದೆಗಳಲ್ಲಿನ ನ್ಯೂನತೆಗಳನ್ನು ಎತ್ತಿಹಿಡಿಯಲು ವಿಪಕ್ಷಗಳು ವಿಫಲವಾಗಿವೆ. ಅದನ್ನು ಸರಿಪಡಿಸಬೇಕೇ ತಿಳಿಸಿ. ಆದರೆ, ವಿಪಕ್ಷಗಳು ಕೃಷಿ ಕಾಯ್ದೆಗಳನ್ನು ಟೀಕಸುತ್ತಿದ್ದಾರೆ. ಅದು ರೈತರಿಗೆ ಹೇಗೆ ಹಾನಿಯುಂಟು ಮಾಡುತ್ತಿದದೆ ಎನ್ನುವ ವಿಚಾರವನ್ನು ವಿವರಿಸುವ ಯತ್ನವನ್ನು ಕೂಡಾ ಮಾಡಿಲ್ಲ" ಎಂದಿದ್ದಾರೆ.