ನವದೆಹಲಿ, ಫೆ.10 (DaijiworldNews/MB) : ಬುಧವಾರ ಮತ್ತೆ ಇಂಧನ ದರ ಏರಿಕೆಯಾಗಿದ್ದು ಪೆಟ್ರೋಲ್ ಪ್ರತಿ ಲೀಟರ್ಗೆ 70 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 27 ಪೈಸೆ ಏರಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.60, ಡೀಸೆಲ್ ಬೆಲೆ 77.73 ಆಗಿದೆ.
ಮುಂಬೈಯಲ್ಲಿ ಪೆಟ್ರೋಲ್ ದರ 95ರ ಸಮೀಪ ತಲುಪಿದೆ. ಇಂದು ಆದ ಏರಿಕೆಯೊಂದಿಗೆ ಪೆಟ್ರೋಲ್ ದರ 94.12, ಡೀಸೆಲ್ ದರ 84.63 ಏರಿದೆ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 90.53, ಡೀಸೆಲ್ ದರ ಪ್ರತಿ ಲೀಟರ್ಗೆ 82.40 ಗೆ ತಲುಪಿದೆ.
ಕಚ್ಚಾ ತೈಲಾ ಬೆಲೆ ಏರಿಕೆಯಾಗುತ್ತಿದ್ದು ಈ ಹಿನ್ನೆಲೆ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ.