ಬೆಂಗಳೂರು, ಫೆ.10 (DaijiworldNews/MB) : ''ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯ ಅಬಕಾರಿ ಆದಾಯವು ಕೊಂಚ ಮಟ್ಟಿಗೆ ಏರಿಕೆಯಾಗಿದ್ದು 2020-21ರಲ್ಲಿ ತನ್ನ ಆದಾಯ ಗುರಿ 22,700 ಕೋಟಿ ರೂ.ಗಳನ್ನು ಮುಟ್ಟುವ ವಿಶ್ವಾಸ ನಮಗಿದೆ'' ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ''ಮುಂದಿನ ಆರ್ಥಿಕ ವರ್ಷದಲ್ಲಿ ಎಷ್ಟು ಆದಾಯ ಸಂಗ್ರಹ ಮಾಡಬೇಕು ಎಂಬ ಗುರಿಯನ್ನು ನಿಗದಿ ಮಾಡಲಿದೆ. ಈ ವರ್ಷ 22,700 ರೂ. ಕೋಟಿ ಗುರಿ ನಿಗದಿ ಮಾಡಿತ್ತು. ಮಾರ್ಚ್ 31 ಕ್ಕೆ ಇದನ್ನು ತಲುಪುವ ಗುರಿ ಇದೆ. ಈ ವರ್ಷ 800 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹವಾಗಿದೆ. ಈವರೆಗೆ 19,433 ರೂ. ಕೋಟಿ ಸಂಗ್ರಹವಾಗಿದೆ. ಬಾಕಿ ಮೊತ್ತವನ್ನು ಬಜೆಟ್ನಲ್ಲಿ ಸಂಗ್ರಹಿಸಲಾಗುವುದು'' ಎಂದು ತಿಳಿಸಿದ್ದಾರೆ.
ಇನ್ನು, ''ಅಬಕಾರಿ ಆದಾಯದ ಸೋರಿಕೆ ಮತ್ತು ಅಕ್ರಮಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಅಬಕಾರಿ ಕಚೇರಿಗಳಿಗೆ ತಲಾ ನಾಲ್ಕು ಪಿಸ್ತೂಲ್ಗಳನ್ನು ನೀಡಲು ತೀರ್ಮಾನಿಸಲಾಗಿದೆ'' ಎಂದು ಕೂಡಾ ತಿಳಿಸಿದ್ದಾರೆ.