ಪಶ್ಚಿಮ ಬಂಗಾಳ, ಫೆ. 09 (DaijiworldNews/HR): "ಪಶ್ಚಿಮ ಬಂಗಾಳದ ರೈತರಿಗೆ ಕೇಂದ್ರ ಸರ್ಕಾರವೂ ಪಿಎಂ-ಕಿಸಾನ್ ಯೋಜನೆಯಡಿ ಹಣ ಬಿಡುಗಡೆ ಮಾಡಿಲ್ಲ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ಕುರಿತು ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, "ರೈತರಿಗೆ ಹಣ ನೀಡುವುದನ್ನು ನಮ್ಮ ಸರ್ಕಾರ ನಿರಾಕರಿಸುತ್ತಿದೆ ಎಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಟಿಎಂಸಿ ಸರ್ಕಾರ ರಾಜ್ಯದ ಪ್ರತಿ ರೈತರಿಗೆ 5 ಸಾವಿರ ಹಣ ಕೊಡುವ ಜತೆಗೆ, ಉಚಿತ ಬೆಳೆ ವಿಮೆಯ ಸೌಲಭ್ಯವನ್ನೂ ಕೂಡ ನೀಡಿದೆ" ಎಂದರು.
ಇನ್ನು "ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಕಳುಹಿಸಿದ್ದ 6 ಲಕ್ಷ ರೈತರ ಹೆಸರುಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಿ, ಎರಡೂವರೆ ಲಕ್ಷ ರೈತರ ಹೆಸರನ್ನು ಆಯ್ಕೆ ಮಾಡಿ, ಆ ಪಟ್ಟಿಯನ್ನು ಮತ್ತೆ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಇಲ್ಲಿವರೆಗೆ ಆ ರೈತರಿಗೆ ಹಣ ನೀಡಿಲ್ಲ" ಎಂದು ಹೇಳಿದ್ದಾರೆ.