ಮುಂಬೈ, ಫೆ. 09 (DaijiworldNews/HR): ದಿವಂಗತ ನಟ ರಿಷಿ ಕಪೂರ್ ಸಹೋದರ, ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್(58 ) ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ.
ರಾಜೀವ್ ಕಪೂರ್ ಅವರಿಗೆ ಎದೆ ನೋವು ಕಾಣಿಸಿಕೊಳ್ತಿದ್ದಂತೆ ಸಹೋದರ ರಣಧೀರ್ ಕಪೂರ್ ಅವರನ್ನು ಚೆಂಬೂರಿನ ಐಲೆಕ್ಸ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ನೀಡುವ ಮೊದಲೇ ರಾಜೀವ್ ಕಪೂರ್ ನಿಧನರಾಗಿದ್ದಾರೆ ಎನ್ನಲಾಗಿದೆ.
ಇನ್ನು ರಾಜೀವ್ ಕಪೂರ್ ನಿಧನದ ಸುದ್ದಿಯನ್ನು ರಣಧೀರ್ ಕಪೂರ್ ಖಚಿತಪಡಿಸಿದ್ದು, ರಾಜೀವ್ ಕಪೂರ್, ರಾಮ್ ತೇರಿ ಗಂಗಾ ಮೈಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಿಷಿ ಕಪೂರ್ ಪತ್ನಿ ನೀತು ಕಪೂರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ರಾಜೀವ್ ಕಪೂರ್ ನಿಧನರಾದ ವಿಷಯವನ್ನು ಹಂಚಿಕೊಂಡಿದ್ದಾರೆ.