ಪಟ್ನಾ,ಫೆ. 09 (DaijiworldNews/HR): ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇಂದು ನಡೆದ ಸಮಾರಂಭದಲ್ಲಿ ಬಿಜೆಪಿ ಹಿರಿಯ ನಾಯಕ ಸೈಯದ್ ಶಹನವಾಜ್ ಹುಸೇನ್ ಮೊದಲಿಗರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಹಾರದಲ್ಲಿ ಜನವರಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಮತ್ತು ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು ಎನ್ನಲಾಗಿದೆ.
ಇನ್ನು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಫಗು ಚೌಹಾಣ್ ಅವರು ಶಹನವಾಜ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದು, ಸಮಾರಂಭದಲ್ಲಿ ಜೆಡಿ(ಯು) ನಾಯಕರಾದ ಸಂಜಯ್ ಕುಮಾರ್ ಝಾ, ಶ್ರವಣ್ ಕುಮಾರ್, ಲೆಸಿ ಸಿಂಗ್ ಮತ್ತು ಮದನ್ ಸಹ್ನಿ ಮತ್ತು ಬಿಜೆಪಿಯ ಪ್ರಮೋದ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.