ದಾವಣಗೆರೆ, ಫೆ.09 (DaijiworldNews/MB) : ''ಶ್ರೀರಾಮುಲು ಅವರದ್ದೇ ಸರ್ಕಾರವಿದ್ದು ಕುಂಬಳಕಾಯಿ ಹಾಗೂ ಕುಡುಗೋಲು ಎರಡೂ ಅವರ ಕೈಯಲ್ಲೇ ಇದೆ. ಹಾಗಿರುವಾಗ ಶ್ರೀ ರಾಮುಲು ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿ ಮೀಸಲಾತಿ ಪ್ರಮಾಣ ಅಧಿಕಗೊಳಿಸಬೇಕು'' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯ ಮಾಡಿದ್ದಾರೆ.
''ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರು ತಲಾ 100 ಎಂ.ಜಿ. ಮಾತ್ರೆ ಇದ್ದಂತಿದೆ. ಇಬ್ಬರೂ ಸೇರಿ ಸರ್ಕಾರಕ್ಕೆ ಒತ್ತಡ ಹೇರಿ ಮೀಸಲಾತಿ ಪಡೆಯಬೇಕು, ಅದು ಕಷ್ಟವಾಗಲಾರದು'' ಎಂದಿದ್ದಾರೆ.
''ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ಆದರೆ ಮಾಡಲಿಲ್ಲ, ಅದಕ್ಕೆ ತಕ್ಕ ಪಾಠವನ್ನು ಸಮಾಜ ಕಲಿಸಿದೆ. ನೀವು ಬಳಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದರೆ ನೀವು ಈಗ ಮೀಸಲಾತಿ ಹೆಚ್ಚಿಸಬೇಕು, ನಾವೂ ನಿಮ್ಮೊಂದಿಗೆ ಇದ್ದೇವೆ'' ಎಂದು ಕೂಡಾ ಹೇಳಿದ್ದಾರೆ.
''ನ್ಯಾಯಯುತವಾಗಿ ನೀಡಬೇಕಾದ ಮೀಸಲಾತಿಯನ್ನು ನೀಡಬೇಕು. ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರು ತಮ್ಮ ಶಕ್ತಿಯನ್ನು ಸಮಾಜಕ್ಕಾಗಿಯೂ ಪ್ರಯೋಗ ಮಾಡಬೇಕು'' ಎಂದಿದ್ದಾರೆ.