ಬೆಂಗಳೂರು,ಫೆ. 09 (DaijiworldNews/HR): ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಕರ್ನಾಟಕ ವಿಧಾನ ಪರಿಷತ್ನ ನೂತನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಬಸವರಾಜ್ ಹೊರಟ್ಟಿ ಕಣಕ್ಕೆ ಇಳಿದಿದ್ದು, ಕಾಂಗ್ರೆಸ್ನಿಂದ ನಜೀರ್ ಅಹ್ಮದ್ ಅಭ್ಯರ್ಥಿಯಾಗಿದ್ದರು.
ಗೋ ಹತ್ಯೆ ನಿಷೇಧ ವಿಧೇಯಕ ವಿಧಾನಪರಿಷತ್ನಲ್ಲಿ ಅಂಗೀಕಾರ ವಿಚಾರವಾಗಿರುವುದಕ್ಕೆ ಕಾಂಗ್ರೆಸ್ ಇಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಸಭಾಪತಿ ಚುನಾವಣೆಗೆ ಪ್ರಸ್ತಾವನೆ ಸಲ್ಲಿಸುವಾಗ ಕಾಂಗ್ರೆಸ್ನಿಂದ ಸಲ್ಲಿಕೆಯಾಗಿಲ್ಲ, ಆದ ಕಾರಣ ಬಸವರಾಜ್ ಹೊರಟ್ಟಿ ಅವರೇ ಮುಂದಿನ ಸಭಾಪತಿ ಎಂದು ಘೋಷಿಸಲಾಯಿತು ಎಂದು ತಿಳಿದು ಬಂದಿದೆ.