ಲಕ್ನೋ, ಫೆ.09 (DaijiworldNews/MB) : ಉತ್ತರ ಪ್ರದೇಶ ಪೊಲೀಸರು, ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಲಕ್ನೋದಲ್ಲಿ 'ಖಲಿಸ್ತಾನ್ ಪರ' ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಆರೋಪಿ ಪಂಜಾಬ್ನ ಫಿರೋಜ್ಪುರದ ನಿವಾಸಿ ಜಗದೇವ್ ಸಿಂಗ್ ಯಾನೆ ಎ.ಕೆ.ಎ. ಜಗ್ಗಾ ಖಲಿಸ್ತಾನ್ ಪರ ಚಟುವಟಿಕೆಗಳಲ್ಲಿ ಭಾಗಿಯಾಗಿಯಾದ ಬಂಧಿತ ಎಂದು ಪೊಲೀಸರು ಹೇಳಿದ್ದಾರೆ.
ಆತ ಖಲಿಸ್ತಾನ್ ಭಯೋತ್ಪಾದಕ ಪರಮ್ಜೀತ್ ಸಿಂಗ್ ಪಮ್ಮಾ, ಮಾಲ್ತಾನಿ ಸಿಂಗ್ ಮತ್ತು ಇತರರೊಂದಿಗೆ ಸಂಪರ್ಕದಲ್ಲಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪಡೆದು ಪಂಜಾಬ್ ಪೊಲೀಸರು ಕರೆದೊಯ್ಯಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.