ಪಾಲಕ್ಕಾಡ್, ಫೆ.09 (DaijiworldNews/MB) : ಮಹಿಳೆ ತನ್ನ 6 ವರ್ಷದ ಮಗನನ್ನು ಕೊಲೆ ಮಾಡಿ, ನಂತರ ಅಲ್ಲಾಹನ ಕೃಪೆಯನ್ನು ಗೆಲ್ಲುವ ಸಲುವಾಗಿ ತಾನು ಈ ಬಲಿ ನೀಡಿದೆ ಎಂದು ಹೇಳಿದ ಭೀಕರ ಘಟನೆ ಪಾಲಕ್ಕಾಡ್ ಬಳಿ ವರದಿಯಾಗಿದೆ.
ಈ ಘಟನೆಯನ್ನು ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆಗೆ ಹೋಲಿಸಬಹುದಾಗಿದೆ. ಹೈದರಾಬಾದ್ನಲ್ಲಿ ನಡೆದ ಪ್ರಕರಣದಲ್ಲಿ ಸುಶಿಕ್ಷಿತ ಪೋಷಕರು ತಮ್ಮ ಮಕ್ಕಳನ್ನು ಕೊಂದು ನಾಳೆ ಕಲಿಯುಗ ಆರಂಭ ಆ ವೇಳೆ ಅವರು ಮತ್ತೆ ಬದುಕುತ್ತಾರೆ ಎಂದು ಹೇಳಿದ್ದರು.
ಪಾಲಕ್ಕಾಡ್ನಲ್ಲಿ ನಡೆದ ಘಟನೆಯಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ತಾಯಿ, ತನ್ನ ಮಗನನ್ನು ಅಲ್ಲಾಹನಿಗೆ ಬಲಿ ನೀಡುವ ರೂಪದಲ್ಲಿ ಕೊಲೆ ಮಾಡಿದಳು.
ತನ್ನ ಮಗನನ್ನು ಕೊಂದ ನಂತರ, ಮಹಿಳೆ ತನ್ನ ಮಗನನ್ನು ಕೊಲೆ ಮಾಡಿದ್ದಾಳೆಂದು ತಿಳಿಸಲು ಪೊಲೀಸರಿಗೆ ಕರೆ ಮಾಡಿದಳು. ಅಲ್ಲಾಹನ ಕರುಣೆಯನ್ನು ಗೆಲ್ಲಲು ಈ ಬಲಿ ನೀಡಿದ್ದೇನೆ ಎಂದು ಶಿಕ್ಷಕಿ ಪೊಲೀಸರಿಗೆ ಹೇಳಿದ್ದಾಳೆ.
ಇನ್ನು ಈ ಘಟನೆ ಯಾವ ಸಂದರ್ಭದಲ್ಲಿ ಸಂಭವಿಸಿದೆ ಎಂದು ಬೇರೆ ಕೋಣಿಯಲ್ಲಿ ಮಲಗಿದ್ದ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳಿಗೆ ತಿಳಿದಿಲ್ಲ.
ಫೆಬ್ರವರಿ 7 ರ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪಿ ಶಾಹಿದಾ (31) ಅವರು ಗೇಟ್ ಬಳಿ ಪೊಲೀಸರಿಗಾಗಿ ಕಾಯುತ್ತಿದ್ದರು ಎಂದು ವರದಿಯಾಗಿದೆ.
ಪಾಲಕ್ಕಾಡ್ನ ಪುಟ್ಟುಪಲ್ಲಿಥೆರುವ್ನ ಶಾಹಿದಾಗೆ ಮೂವರು ಮಕ್ಕಳಿದ್ದು ಆಕೆ ತನ್ನ ಮೂರನೆಯ ಮಗು, ಆರು ವರ್ಷದ ಅಮಿಲ್ನನ್ನು ಅಲ್ಲಾಹನಿಗೆ ಬಲಿ ನೀಡುವ ನೆಪದಲ್ಲಿ ಹತ್ಯೆ ಮಾಡಿದ್ದಾಳೆ ಹೇಳಲಾಗಿದೆ. ಬಳಿಕ ಆಕೆ ಪಾಲಕ್ಕಾಡ್ ತುರ್ತು ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಾನು ಮಾಡಿದ್ದನ್ನು ವಿವರಿಸಿದಳು.
ಭಾನುವಾರ ಮುಂಜಾನೆ 3 ರಿಂದ 4 ರ ನಡುವೆ ಈ ಘಟನೆ ನಡೆದಿದೆ. ಇನ್ನು ಈ ಘಟನೆ ನಡೆದ ಹಿಂದಿನ ದಿನ ರಾತ್ರಿ ನೆರೆಹೊರೆಯವರಿಂದ ಪೊಲೀಸ್ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಯನ್ನು ಕೇಳಿದ್ದಳೆಂದು ವರದಿಯಾಗಿದೆ.
ಪೊಲೀಸರು ಬಂದಾಗ, ಸ್ನಾನದ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಶಾಹಿದಾ ಮಗುವಿನ ಎರಡೂ ಕಾಲುಗಳನ್ನು ಕಟ್ಟಿಹಾಕಿ ಮಗುವಿನ ಗಂಟಲು ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಹಿದಾ ಮದರಸಾದಲ್ಲಿ ಶಿಕ್ಷಕಿಯಾಗಿದ್ದಳು. ಆಕೆ ಪ್ರಸ್ತುತ ಮೂರು ತಿಂಗಳ ಬಸುರಿ ಎಂದು ವರದಿಯಾಗಿದೆ. ಪತಿ ಸುಲೈಮಾನ್ ಪಾಲಕ್ಕಾಡ್ ನಗರದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.