ಶಿವಮೊಗ್ಗ, ಫೆ.08 (DaijiworldNews/PY): "ಸರ್ಕಾರಿ ನೌಕರರು ಹೊಟ್ಟೆ ಬೆಳೆಸಿಕೊಳ್ಳುವುದನ್ನು ಬಿಟ್ಟು, ಆರೋಗ್ಯದ ಕಡೆಯೂ ಕೂಡಾ ಗಮನವಹಿಸಿ" ಎಂದು ಉಸ್ತುವಾರಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, "ಸರ್ಕಾರಿ ನೌಕರರು ತಮ್ಮ ಕೆಲಸದಲ್ಲೇ ನಿರತರಾಗಿರುತ್ತಾರೆ. ಇದರೊಂದಿಗೆ ಅವರು ಆರೋಗ್ಯ ಕಡೆಯೂ ಕೂಡಾ ಗಮನ ಹರಿಸಬೇಕು. ಬೆಳಗ್ಗಿನಿಂದ ಸಂಜೆಯ ತನಕ ಕೆಲಸ ಮಾಡುವ ಕಾರಣ ಎಷ್ಟೋ ಮಂದಿ ನೌಕರರು ಹೊಟ್ಟೆ ಬೆಳೆಸಿಕೊಂಡಿರುತ್ತಾರೆ. ಹೊಟ್ಟೆ ಬೆಳೆಸಿಕೊಳ್ಳುವುದನ್ನು ಬಿಟ್ಟು, ವ್ಯಾಯಾಮ ಮಾಡಿ ಫಿಟ್ ಆಗಿ. ನಿಮ್ಮ ಕುಟುಂಬಕ್ಕಾಗಿ ನೀವು ಆರೋಗ್ಯವಂತರಾಗಿರಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸರ್ಕರಿ ನೌಕರರ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚಿನ ನೌಕರರು ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ.