ಬಳ್ಳಾರಿ, ಫೆ.08 (DaijiworldNews/PY): ವಿಜಯನಗರವು ರಾಜ್ಯದ 31ನೇ ಜಿಲ್ಲೆಯಾಗಿ ಅಧಿಕೃತವಾಗಿ ರಚನೆಯಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ರಾಜಪತ್ರ ಪ್ರಕಟಿಸಿದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಆರು ತಾಲೂಕುಗಳನ್ನೊಳಗೊಂಡ ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನು ಅಧಿಕೃತಗೊಳಿಸಲಾಗಿದೆ.
ಹೊಸ ವಿಜಯನಗರ ಜಿಲ್ಲೆಯಲ್ಲಿ ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ ಸೇರಿದಂತೆ ಹರಪನಹಳ್ಳಿ, ಹೊಸಪೇಟೆ, ಕೊಟ್ಟೂರು ಹಾಗೂ ಕೂಡ್ಲಿಗಿ ತಾಲೂಕುಗಳಿರಲಿದ್ದು, ಹೊಸಪೇಟೆಯು ಜಿಲ್ಲಾ ಕೇಂದ್ರವಾಗಿರಲಿದೆ.
ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಸಿರಗುಪ್ಪ, ಬಳ್ಳಾರಿ, ಸಂಡೂರು, ಕುರುಗೋಡು ಹಾಗೂ ಕಂಪ್ಲಿ ತಾಲೂಕುಗಳಿರಲಿವೆ. ಜಿಲ್ಲಾ ಕೇಂದ್ರವಾಗಿ ಬಳ್ಳಾರಿ ಮುಂದುವರೆಯಲಿದೆ.