ನವದೆಹಲಿ, ಫೆ.08 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಹಿಮಪರ್ವತ ಕುಸಿತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಧೈರ್ಯ ಹೇಳಿದ್ದು, "ಇಡೀ ದೇಶ ಉತ್ತರಾಖಂಡದೊಂದಿಗಿದೆ ನಿಲ್ಲಲಿದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮುಂದಿನ ಕೆಲವು ದಿನಗಳವರೆಗೆ ಪರಿಹಾರ ಕಾರ್ಯದಲ್ಲಿ ಯಾವುದೇ ಅಡಚಣೆಯಾಗದಂತೆ ರಾಜ್ಯ ಸರ್ಕಾರಗಳು ಗಮನಹರಿಸುವುದು ಬಹಳ ಮುಖ್ಯ" ಎಂದು ಹೇಳಿದ್ದಾರೆ.
"ಸಂಕಷ್ಟಕ್ಕೊಳಗಾದ ಕುಟುಂಬಗಳೊಂದಿಗೆ ನಾನು ಹೃತ್ಪೂರ್ವಕವಾಗಿ ನಿಲ್ಲುತ್ತೇನೆ. ಹಾಗೆಯೇ, ನಿಮ್ಮ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಚಮೋಲಿ ಜಿಲ್ಲೆಯಲ್ಲಿ ಫೆ.7ರ ರವಿವಾರದಂದು ಸಂಭವಿಸಿದ ಭಾರೀ ಹಿಮಪರ್ವತ ಕುಸಿತದ ಅವಘಡದಲ್ಲಿ 15 ಮಂದಿ ಸಾವನ್ನಪ್ಪಿದ್ದು, 150 ಮಂದಿ ಕಾಣೆಯಾಗಿದ್ದಾರೆ.