ನವದೆಹಲಿ, ಫೆ. 08 (DaijiworldNews/HR): ರೈತರ ಕೃಷಿ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾತನಾಡಿದ್ದು "ವಿದೇಶಿ ವಿನಾಶಕಾರಿ ಸಿದ್ಧಾಂತದಿಂದ (ಎಪ್ಡಿಐ) ನಾವು ದೇಶವನ್ನು ರಕ್ಷಿಸಬೇಕಿದೆ" ಎಂದು ಹೇಳಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಅವರು, " ಪ್ರತಿಭಟನೆಯ ಹೆಸರಿನಲ್ಲಿ ಹೊಸ ತಲೆಮಾರಿನ ಜನರನ್ನು ದಾರಿ ತಪ್ಪಿಸಲಾಗುತ್ತಿದ್ದು, ಹಾಗೂ ದೇಶದ ಪ್ರಗತಿಗೆ ಅಡ್ಡಿಪಡಿಸಲಾಗುತ್ತಿದೆ. ಹಾಗಾಗಿ ದೇಶದ ಹೊಸ ತಲೆಮಾರಿನ ಜನರನ್ನು ವಿದೇಶಿ ವಿನಾಶಕಾರಿ ಸಿದ್ಧಾಂತಗಳಿಂದ ರಕ್ಷಿಸಿಬೇಕಿದ್ದು, ಅವರಲ್ಲಿ ಜಾಗೃತಿ ಮೂಡಿಸಬೇಕಿದೆ" ಎಂದರು.
ಇನ್ನು "ದೇಶದಲ್ಲಿ ಹೊಸ ತಳಿಯ ಪ್ರತಿಭಟನಾಕಾರರು ಮತ್ತು ಚಳವಳಿಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಜನರು ಎಚ್ಚರದಿಂದಿರಬೇಕು. ಈಗ ದೇಶದಲ್ಲಿ ಹೊಸ ಎಫ್ಡಿಐ (ವಿದೇಶಿ ವಿನಾಶಕಾರಿ ಐಡಿಯಾಲಜಿ) ಹುಟ್ಟಿಕೊಂಡಿದ್ದು, ಆ ಸಿದ್ಧಾಂತದಿಂದ ದೇಶವನ್ನು ರಕ್ಷಿಸಬೇಕಾಗಿದೆ" ಎಂದು ಹೇಳಿದ್ದಾರೆ.