ಮುಂಬೈ, ಫೆ. 08 (DaijiworldNews/HR): ಮುಂಬೈಯ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಸುಳ್ಳು ಟ್ವೀಟ್ ಮಾಡಿದ್ದ 19 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಕಮಾಂಡೊ ಸಿಂಗ್'ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಜನವರಿ 22 ರಂದು ಬನ್ವಾರಿ ಸಿಂಗ್ ಎಂಬಾತ ಈ ರೀತಿಯ ಸುಳ್ಳು ಟ್ವೀಟ್ ಮಾಡಿದ್ದ ಎನ್ನಲಾಗಿದೆ.
ಈ ಟ್ವೀಟ್ನಲ್ಲಿ ಹಿಂದಿ ಭಾಷೆಯ 'ಮೇಡಂ ಚೀಫ್ ಮಿನಿಸ್ಟರ್' ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಉಪನಗರ ಪ್ರದೇಶಗಳಾದ ಮಲಾಡ್, ಅಂಧೇರಿ ಮತ್ತು ವಾಸೈ ಮಲ್ಟಿಪ್ಲೆಕ್ಸ್ಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ತಿಳಿಸಿದ್ದು, ಇದನ್ನು ಮುಂಬೈ ಪೊಲೀಸ್ ಮತ್ತು ಅಲ್ಲಿನ ಕಮಿಷನರ್ಗೆ ಟ್ಯಾಗ್ ಕೂಡ ಮಾಡಿದ್ದ ಎಮ್ದು ವರದಿಯಾಗಿದೆ.
ಇನ್ನಿ ಈ ಕುರಿತು ಕಾರ್ಯಾಚರಣೆ ಆರಂಭಿಸಿದ ಪೊಲೀಸರಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಯಾವುದೇ ಬಾಂಬ್ ಸಿಕ್ಕಿಲ್ಲ, ಇದೊಂದು ಹುಸಿ ಟ್ವೀಟ್ ಆಗಿದ್ದು, ಈ ನಡುವೆ ಆರೋಪಿಯು ಈ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾನೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.