ನವದೆಹಲಿ, ಫೆ.08 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರ ಬಜೆಟ್ನಲ್ಲಿ ಯೋಧರ ಪಿಂಚಣಿ ಕಡಿತಗೊಳಿಸಿರುವ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪ್ರಸ್ತುತ ಬಜೆಟ್ನಲ್ಲಿ ಸೈನಿಕರ ಪಿಂಚಣಿಯನ್ನು ಕಡಿತಗೊಳಿಸಲಾಗಿದೆ. ಯುವಕರು ಹಾಗೂ ರೈತರು ಮೋದಿ ಸರ್ಕಾರಕ್ಕೆ ಸ್ನೇಹಿತರಲ್ಲ. ಕೇವಲ 3-4 ಕೈಗಾರಿಕೋದ್ಯಮಿಗಳೇ ಮೋದಿ ಅವರ ಸ್ನೇಹಿತರು. ಅವರಿಗೆ ಅವರೇ ದೇವರು" ಎಂದಿದ್ದಾರೆ.
ಇದಕ್ಕೂ ಮುನ್ನು ಕೇಂದ್ರ ಬಜೆಟ್ ಬಗ್ಗೆ ಟ್ವೀಟ್ ಮಾಡಿರುವ ಅವರು, "ಈ ಬಾರಿಯ ಬಜೆಟ್ ಭಾಷಣದ ಸಂದರ್ಭ ಕೇಂದ್ರ ಹಣಕಾಸು ಸಚಿವರು ಆರು ಬಾರಿ ಪ್ರಧಾನಿ ಪದವನ್ನು ಹಾಗೂ 17 ಬಾರಿ ಕಾರ್ಪೊರೇಟ್ ಕಂಪೆನಿಗಳ ಪದವನ್ನು ಬಳಸಿದ್ದಾರೆ. ಆದರೆ, ಅವರು ರಕ್ಷಣೆ ಹಾಗೂ ಚೀನಾ ಪದಗಳನ್ನು ಎಲ್ಲಿಯೂ ಕೂಡಾ ಉಲ್ಲೇಖಿಸಿಲ್ಲ" ಎಂದು ಕಿಡಿಕಾರಿದ್ದಾರೆ