ಹೊಸದಿಲ್ಲಿ,ಫೆ. 08 (DaijiworldNews/HR): "ದೇಶದ ಸೇನೆ ಹಾಗೂ ಪೊಲೀಸ್ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮ ಮಕ್ಕಳ ಫೋಟೋಗಳೊಂದಿಗೆ ಪ್ರತಿಭಟನೆಗೆ ಬನ್ನಿ" ಎಂದು ರೈತರಿಗೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಕೇಂದ್ರ ಸರಕಾರ ನಮ್ಮ ಬೇಡಿಕೆಗಳನ್ನು ಕೇಳಬೇಕು. ಇಲ್ಲದಿದ್ದರೆ ಮುಂದಿನ ಹಂತವಾಗಿ ನಾವೆಲ್ಲರೂ ಸೇನೆಯಲ್ಲಿರುವ ನಮ್ಮ ಮಕ್ಕಳ ಫೋಟೋಗಳೊಂದಿಗೆ ಬಂದು ಪ್ರತಿಭಟಿಸುತ್ತೇವೆ. ರೈತ ರ ಮಕ್ಕಳು ಅನೇಕ ಸಂಖ್ಯೆಯಲ್ಲಿ ಸೇನೆಯಲ್ಲಿದ್ದಾರೆ. ಕಾನೂನು ನೋಟಿಸ್ ಜಾರಿ ಮಾಡುವ ಮೂಲಕ ರೈತರ ಧ್ವನಿ ಹತ್ತಿಕ್ಕಬಹುದು ಎಂದು ಸರಕಾರ ಯೋಚಿಸುವುದು ಬೇಡ" ಎಂದರು.
ಇನ್ನು "ಮೋದಿ ನೇತೃತ್ವದ ಸರಕಾರವು ಮಾತುಕತೆಗೆ ಒಂದಾದ ಮೇಲೆ ಒಂದರಂತೆ ದಿನಾಂಕ ನಿಗದಿಪಡಿಸುತ್ತಿದೆಯೇ ಹೊರತು ಈ ಕ್ರೂಷಿ ಕಾಯ್ದೆಯನ್ನು ರದ್ದು ಮಾಡುವುದು ಯಾವಾಗ ಎಂದು ಹೇಳುತ್ತಿಲ್ಲ" ಎಂದು ಹೇಳಿದ್ದಾರೆ.