ಶಿಲ್ಲಾಂಗ್, ಫೆ.08 (DaijiworldNews/PY): ದೇಶದಲ್ಲಿ ದಿನೇ ದಿನೇ ತೈಲದ ಬೆಲೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಮೇಘಾಲಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯಲ್ಲಿ ಎರಡು ರೂ ಕಡಿತ ಮಾಡಿದೆ.
ಈ ಬಗ್ಗೆ ಮೇಘಾಲಯ ಸಿಎಂ ಕನ್ರಾಡ್ ಸಂಗ್ಮಾ ಅವರು ಮಾಹಿತಿ ನೀಡಿದ್ದು, "ಸೋಮವಾರ ಮಧ್ಯರಾತ್ರಿಯಿಂದ ರಾಜ್ಯದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 2 ರೂ.ಗೆ ಇಳಿಸಲು ಮೇಘಾಲಯ ಸರ್ಕಾರ ತೀರ್ಮಾನ ಮಾಡಿದೆ" ಎಂದಿದ್ದಾರೆ.
"ಇತ್ತೀಚೆಗೆ ಮೇಘಾಲಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಹಿನ್ನೆಲೆ, ಪೆಟ್ರೋಲ್ ಹಾಗೂ ಡೀಸೆಲ್ ಎರಡರ ದರವನ್ನು ಪ್ರತೀ ಲೀಟರ್ಗೆ ಎರಡು ರೂ ಕಡಿತ ಮಾಡಲಾಗುವುದು. ಇದಕ್ಕೆ ತೆರಿಗೆಯಲ್ಲಿ ರಾಜ್ಯ ಸರ್ಕಾರ 2 ರೂ ಅನ್ನು ಕಡಿ ಮಾಡಿದೆ. ಫೆ.8ರ ಮಧ್ಯರಾತ್ರಿಯಿಂದ ಹೊಸ ದರಗಳು ಜಾರಿಯಾಗಲಿವೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ತೈಲೋತ್ಪನ್ನಗಳ ಬೆಲೆ ಇಳಿಸಬೇಕು ಎಂದು ಇತ್ತೀಚೆಗೆ ಶಿಲ್ಲಾಂಗ್ನಲ್ಲಿ ಸ್ಥಳೀಯ ಟ್ಯಾಕ್ಸಿ ನಿರ್ವಾಹಕರು ಪ್ರತಿಭಟನೆ ನಡೆಸಿದ್ದು, ಇದರ ಬೆನ್ನಲ್ಲೇ ಮೇಘಾಲಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.