ಹೊಸದಿಲ್ಲಿ, ಫೆ. 08 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆ ವಿರೋಧಿಸೊ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ಟ್ವಿಟ್ಟರ್ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸರ್ಕಾರ, ಖಲಿಸ್ತಾನ್ ಹಾಗೂ ಪಾಕಿಸ್ತಾನದಿಂದ ಬೆಂಬಲ ಪಡೆಯುತ್ತಿರುವ ಶಂಕೆ ಇರುವ 1178 ಖಾತೆಗಳನ್ನು ತಡೆಯುವಂತೆ ಟ್ವೀಟ್ಟರ್ ಸಂಸ್ಥೆಯನ್ನು ಆಗ್ರಹಿಸಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ 257 ಖಾತೆಗಳನ್ನು ನಿಷೇಧಿಸುವಂತೆ ಆಗ್ರಹ ಮಂಡಿಸಿದ್ದು, ಇದೀಗ ಮತ್ತೆ 1178 ಖಾತೆಗಳ ತಡೆಗೆ ಟ್ವಿಟ್ಟರ್ ಸಂಸ್ಥೆಯನ್ನು ಒತ್ತಾಯಿಸಿದೆ.
ಇನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದು, ಈ ಸಂಬಂಧ ಸಲ್ಲಿಸಿದ ಪ್ರಶ್ನಾವಳಿಗೆ ಟ್ವೀಟ್ಟರ್ ವಕ್ತಾರ ಯಾವುದೇ ಉತ್ತರ ನೀಡಿಲ್ಲ್ ಎಂದು ತಿಳಿದು ಬಂದಿದೆ.