ಬೆಂಗಳೂರು, ಫೆ.08 (DaijiworldNews/PY): ಎಐಎಂಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರು ಸೋಮವಾರ ಬೆಳಗ್ಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದ ಅವರು ನಗರದ ದೇವನಹಳ್ಳಿ ಸಮೀಪದ ರೆಸಾರ್ಟ್ವೊಂದರಲ್ಲಿ ತಂಗಿದ್ದರು.
ರೆಸಾರ್ಟ್ನಿಂದ ಹೊರಡುವ ಮೊದಲು ಶಶಿಕಲಾ ಅವರು ದಿ.ಜಯಲಲಿತಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಮಿಳುನಾಡಿವೆ ವಾಪಸ್ಸಾಗುತ್ತಿರುವ ಶಶಿಕಲಾ ಅವರಿಗೆ ಸ್ವಾಗತಕೋರಲು ನೂರಾರು ಮಂದಿ ಬೆಂಬಲಿಗರು ದೇವನಹಳ್ಳಿ ಕೊಡಗುರ್ಕಿಗೆ ಆಗಮಿಸಿದ್ದಾರೆ.
ಈ ನಡುವೆ ತಮಿಳನಾಡು ಗಡಿಯ ತನಕ ಶಶಿಕಲಾ ಅವರ ಸ್ವಾಗತ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ನಿರ್ಬಂಧಿಸಿದ್ದಾರೆ. ಕೊರೊನಾ ನಿಯಮ ಪಾಲನೆ ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಶಶಿಕಲಾ ಅವರು ಎಲ್ಲಾ ಕಡೆ ಭೇಟಿ ಮಾಡಲಿದ್ದು, ಕೇವಲ ಎರಡು ನಿಮಿಷ ಕೈ ಬೀಸಿ ಶುಭಾಶಯ ಕೋರಲಿದ್ದಾರೆ. ಹೊರತಾಗಿ ಅವರು ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ರಾತ್ರಿಯ ವೇಳೆಗೆ ಚಿನ್ನೈನ ನಿವಾಸಕ್ಕೆ ತಲುಪಲಿದ್ದಾರೆ ಎಂದಿದ್ದಾರೆ.