ಬಾಗಲಕೋಟೆ, ಫೆ. 08 (DaijiworldNews/HR): ಜಿಲ್ಲೆಯ ಇಳಕಲ್ ನಗರದಲ್ಲಿ ಸಂಭಂವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಪರಿಣಾಮ ಬೃಹತ್ ವಾಣಿಜ್ಯ ಸಂಕೀರ್ಣದಲ್ಲಿದ್ದ 17ಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಇಳಕಲ್ನ ಬಸವೇಶವರ ಸರ್ಕಲ್ನಲ್ಲಿರುವ ವಾಣಿಜ್ಯ ಸಂಕೀರ್ಣ ಚಂದ್ರಶೇಖರ್ ಸಜ್ಜನ್ ಎಂಬವರಿಗೆ ಸೇರಿದ್ದಾಗಿದೆ.
ಇನ್ನು ಬೆಂಕಿಗಾಹುತಿಯಾದ ಅಂಗಡಿಗಳಲ್ಲಿ ಇಳಕಲ್ ರೇಷ್ಮೆ ಸೀರೆ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಮೋರ್ ಸೂಪರ್ ಮಾರ್ಕೆಟ್, ಸಿಹಿ ತಿನಿಸಿನ ಮಾರಾಟ ಮಳಿಗೆಗಳು ಸೇರಿದ್ದು 20 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.
ಈ ಅವಘಡ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಸಂಭವಿಸಿದ್ದು,ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸಪಟ್ಟರು. ಸೋಮವಾರ ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ತಹಬದಿಗೆ ಬಂದಿದ್ದು, ಅದೃಷ್ಟವಶಾತ್ ಅಂಗಡಿಗಳಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.