ಚಮೋಲಿ, ಫೆ.07 (DaijiworldNews/PY): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರೀ ಹಿಮಪ್ರವಾಹ ಉಂಟಾಗಿರುವ ಹಿನ್ನೆಲೆ ಪ್ರವಾಹ ಸ್ಥಿತಿ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಚಮೋಲಿಯ ಜಿಲ್ಲೆಉ ತಪೋವನ್ ಪ್ರದೇಶದ ರೈನಿ ಗ್ರಾಮದಲ್ಲಿ ಹಿಮನದಿ ಉಕ್ಕಿಹರಿದಿದ್ದು, ಇದರ ಪರಿಣಾ ಋಷಿ ಗಂಗಾ ವಿದ್ಯುತ್ ಯೋಜನೆಗೆ ಹಾನಿಯುಂಟಾಗಿದೆ.
ಹಿಮಪ್ರಮಾಹದ ಹಿನ್ನೆಲೆ ಸಂಬಂಧಿಸಿದ ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಗೆ ನೀಡಲಾಗಿದ್ದು, ಎಸ್ಡಿಆರ್ಎಫ್ ಸೇರಿದಂತೆ ಜಿಲ್ಲಾಡಳಿತವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಗಂಗಾ ನದಿಯ ಕಡೆಗೆ ಹೋಗದಂತೆ ಜನರಿಗೆ ಎಚ್ಚರಿಸಲಾಗಿದ್ದು, ಅಲಕಾನಂದ ನದಿಯ ದಡದಲ್ಲಿ ವಾಸಿಸುವ ಜನರಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಹಿಮಪಾತ ಉಂಟಾಗಿರುವ ಕಾರಣ ಕಣಿವೆ ಪ್ರದೇಶದ ನದಿಯ ನೀರನ ಮಟ್ಟ ಏಕಾಏಕಿ ಏರಿದೆ. ಇನ್ನು ರೆನಿಗ್ರಾಮದ ಬಳಿ ಧೌಲಿಗಂಗಾ ಹಾಗೂ ಜೋಶಿಮಠ ಪ್ರದೇಶದಲ್ಲಿ ವ್ಯಾಪಕ ಪ್ರವಾಹದ ಸ್ಥಿತಿಯುಂಟಾಗಿದೆ.
"ಸ್ಥಳಕ್ಕೆ ಐಟಿಬಿಪಿಯ ಎರಡು ತಂಡಗಳನ್ನುರವಾನಿಸಿಲಾಗಿದ್ದು, ಡೆಹಾಡ್ರೂನ್ನಿಂದ ಎನ್ಡಿಆರ್ಎಫ್ನ ಮೂರು ತಂಡಗಳು ಧಾವಿಸಲಾಗುತ್ತಿದೆ. ವಾಯುಪಡೆಯ ಹೆಲಿಕಾಫ್ಟರ್ನೊಂದಿಗೆ ಹೆಚ್ಚುವರಿ ಮೂರು ತಂಡಗಳು ಸಂಜೆಯ ವೇಳೆ ಬಂದು ತಲುಪಲಿವೆ. ಈಗಾಗಲೇ ಎಸ್ಡಿಆರ್ಎಫ್ ಹಾಗೂ ಸ್ಥಳೀಯ ಆಡಳಿತವು ಪ್ರದೇಶದಲ್ಲಿದೆ" ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಾಹಿತಿ ನೀಡಿದ್ದಾರೆ.
ಶೀಘ್ರ ಪರಿಹಾರ ಕಾರ್ಯಾಚರಣೆಗೆ ನೆರವಾಗುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದು, ಎನ್ಡಿಆರ್ಎಫ್ ಹಾಗೂ ವಾಯುಪಡೆಗಳನ್ನು ರವಾನಿಸಲು ಅವರು ಸೂಚಿಸಿದ್ದಾರೆ.