ನವದೆಹಲಿ, ಫೆ.07 (DaijiworldNews/PY): "ರವಿವಾರ ಮುಂಜಾನೆ ಆಗ್ನೇಯ ದೆಹಲಿಯ ಓಖ್ಲಾದ ಹರಿಕೇಶ್ ನಗರದ ಮೆಟ್ರೋ ನಿಲ್ದಾಣದ ಸಮೀಪ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 20ಕ್ಕೂ ಅಧಿಕ ಗುಡಿಸಲುಗಳು ಸುಟ್ಟು ಹೋಗಿವೆ" ಎಂದು ಪೊಲೀಸರು ಹೇಳಿದ್ದಾರೆ.
"ಬೆಂಕಿ ಅವಘಡದಲ್ಲಿ ಯಾವುದೇ ರೀತಿಯಾದ ಪ್ರಾಣಹಾನಿಯಾಗಿಲ್ಲ. ತನಿಖೆ ಮುಂದುವರಿಸಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಕತ್ರಾನ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕಾರ್ಖಾನೆಯ ಅಕ್ಕ-ಪಕ್ಕದಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಆವರಿಸಿದೆ. ಬೆಂಕಿ ಆವರಿಸಿದ ಪರಿಣಾಮ 20ಕ್ಕೂ ಅಧಿಕ ಗುಡಿಸಲುಗಳು ಸುಟ್ಟುಹೋಗಿವೆ.
"ರವಿವಾರ ಮುಂಜಾನೆ 2.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು 26 ಅಗ್ನಿಶಾಮಕ ವಾಹನಗಳನ್ನು ಘಟನಾ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ" ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.